ಅಗ್ನಿಸಾಕ್ಷಿ ಧಾರವಾಹಿ ಬಳಿಕ ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಆ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಪ್ರಿಯಾಂಕ ಈಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡದಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಸತ್ಯ ಎನ್ನುವ ಧಾರವಾಹಿಯಲ್ಲಿ ಪ್ರಿಯಾಂಕ ನಾಯಕಿಯ ಸಹೋದರಿಯ ಪಾತ್ರ ಮಾಡಲಿದ್ದಾರೆ. ಈ ಪ್ರೋಮೋಗಳು ಈಗಾಗಲೇ ವೈರಲ್ ಆಗಿದೆ.