ಬಿಬಿಕೆ 10: ಅಪ್ಪನಿಗೆ ಡ್ರೋಣ್ ಮಾಡಿಕೊಡ್ತೇನೆ ಎಂದ ಪ್ರತಾಪ್

ಶುಕ್ರವಾರ, 24 ನವೆಂಬರ್ 2023 (11:42 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ಡ್ರೋಣ್ ಪ್ರತಾಪ್ ಇದೀಗ ವೀಕ್ಷಕರು, ಮನೆಯವರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಬಿಗ್ ಬಾಸ್ ಪ್ರವೇಶಿಸುವ ಮೊದಲು ಪ್ರತಾಪ್ ಬಗ್ಗೆ ಇದ್ದ ಇಮೇಜ್ ಈಗ ಜನರಿಗೂ ಬದಲಾಗಿದೆ. ಇತ್ತೀಚೆಗೆ ಅವರ ಬಳಿ ಮಾತು ಬಿಟ್ಟಿದ್ದು ತಂದೆ ಜೊತೆ ಪ್ಯಾಚ್ ಅಪ್ ಆದ ಮೇಲಂತೂ ಅವರ ಬಗ್ಗೆ ಅನುಕಂಪವೂ ಸೃಷ್ಟಿಯಾಗಿದೆ.

ಪ್ರತಾಪ್ ಡ್ರೋಣ್ ಮಾಡುತ್ತೇನೆಂದು ವಂಚಿಸಿದ್ದಾರೆ ಎಂದು ಹೊರಗಡೆ ಇದ್ದಾಗ ಜನ ಅವರಿಗೆ ವಂಚಕ ಪಟ್ಟ ಕಟ್ಟಿರಬಹುದು. ಆದರೆ ಈಗ ಅವರು ಪ್ರಾಮಾಣಿಕ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಡ್ರೋಣ್ ಬಗ್ಗೆ ಮಾತನಾಡಿದ್ದಾರೆ.

ತನಿಷಾ ಕುಪ್ಪಂಡ ಜೊತೆ ಮಾತನಾಡುವಾಗ ತಂದೆಗೆ ತಾನು ನಿರ್ಮಿಸಿದ ಡ್ರೋಣ್ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಹೊರ ಹೋದ ಮೇಲೆ ಏನು ಮಾಡ್ತೀರಿ ಎಂದು ತನಿಷಾ ಕೇಳಿದಾಗ ತಮ್ಮ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.

ಅಮ್ಮನಿಗೆ ಒಂದು ಜೊತೆ ಬಳೆ ಮಾಡಿಸಿಕೊಡ್ತೀನಿ. ಮತ್ತೆ ತಂಗಿಗೆ ಮದುವೆ ಮಾಡಿಸ್ಬೇಕು ಎಂದಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ತನ್ನ ತಂದೆಗೆ ತಾನು ನಿರ್ಮಿಸಿದ ಡ್ರೋಣ್ ತೋಟದಲ್ಲಿ ಬಳಕೆ ಮಾಡಲು ಕೊಡುವುದಾಗಿ ಹೇಳಿದ್ದಾರೆ. ಇದುವರೆಗೆ ನನ್ನ ಡ್ರೋಣ್ ನಮ್ಮ ತೋಟದಲ್ಲೇ ಬಳಸಿಲ್ಲ. ಈಗ ಅಪ್ಪನಿಗೆ ಅದನ್ನು ಬಳಸುವುದು ಹೇಗೆ ಎಂದು ಮಾಹಿತಿ ನೀಡಿ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ