ಬಿಬಿಕೆ10: ಕಾರ್ತಿಕ್ ತಾಯಿ ಬಂದಾಗ ಮಾತನಾಡಲೂ ಬಿಟ್ಟಿಲ್ಲ, ಅನ್ಯಾಯ ಎಂದ ಫ್ಯಾನ್ಸ್
ಬಿಗ್ ಬಾಸ್ ಪಾಸ್ ಆಂಡ್ ಪ್ಲೇ ಆಟ ನೀಡುತ್ತಿದ್ದು, ಆಟಗಾರರು ಪಾಸ್ ಆಗಿದ್ದಾಗ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಪ್ರವೇಶ ಮಾಡುತ್ತಿದ್ದಾರೆ. ಕೆಲವೇ ಕ್ಷಣ ಕುಟುಂಬದವರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಇದು ಎಲ್ಲಾ ಸೀಸನ್ ಗಳಲ್ಲೂ ನಡೆದುಕೊಂಡ ಪದ್ಧತಿ.
ಇಂದಿನ ಎಪಿಸೋಡ್ ನಲ್ಲಿ ಕಾರ್ತಿಕ್ ಮಹೇಶ್ ತಾಯಿ ಮನೆಗೆ ಪ್ರವೇಶ ಮಾಡುತ್ತಿದ್ದಾರೆ. ಆದರೆ ಅಮ್ಮ ಬರುತ್ತಾರೆಂದು ಕಾರ್ತಿಕ್ ಬಟ್ಟೆ ಹಾಕಿ, ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಬಿಗ್ ಬಾಸ್ ಪಾಸ್ ಹೇಳಿದರು. ಹೀಗಾಗಿ ಕಾರ್ತಿಕ್ ಸೇರಿದಂತೆ ಎಲ್ಲಾ ಸದಸ್ಯರೂ ಪಾಸ್ ಆದರು.
ಆದರೆ ಸಾಮಾನ್ಯವಾಗಿ ಬಿಗ್ ಬಾಸ್ ಕುಟುಂಬ ಸದಸ್ಯರು ಬಂದು ಅರೆಕ್ಷಣವಾದ ಮೇಲೆ ಪ್ಲೇ ಹೇಳುತ್ತಾರೆ. ಆದರೆ ಕಾರ್ತಿಕ್ ತಾಯಿ ಹೋಗುವವರೆಗೂ ಪಾಸ್ ನಲ್ಲೇ ಇರಲು ಸೂಚಿಸಿದ್ದಾರೆ. ಇದನ್ನು ನೋಡಿ ವೀಕ್ಷಕರು ಕೆಲವು ಕ್ಷಣವಾದರೂ ತಾಯಿ ಜೊತೆ ಮಾತನಾಡಲು ಬಿಡಬೇಕಿತ್ತು. ಸ್ವಲ್ಪ ಹೊತ್ತಾದರೂ ಪ್ಲೇ ಹೇಳಬಹುದಿತ್ತು ಎನ್ನುತ್ತಿದ್ದಾರೆ. ಈ ಘಟನೆಯನ್ನು ಪೂರ್ತಿಯಾಗಿ ನೋಡಲು ಇಂದಿನ ಎಪಿಸೋಡ್ ನೋಡಬೇಕಾಗುತ್ತದೆ.