ಬಿಬಿಕೆ10: ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ, ಶುಭಾ ಪೂಂಜ ಎಂಟ್ರಿ
ಬಿಗ್ ಬಾಸ್ ನಲ್ಲಿ ಈ ವಾರಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ ಭಾಗಿಯಾಗಿರುವ ಕಾರಣ ಸುದೀಪ್ ಗೆ ವಾರಂತ್ಯದ ಎಪಿಸೋಡ್ ಗೆ ಬರಲು ಸಾಧ‍್ಯವಾಗುತ್ತಿಲ್ಲ.
ಅವರ ಬದಲು ಶನಿವಾರದ ಎಪಿಸೋಡ್ ಗೆ ಬಿಗ್ ಬಾಸ್ ವಿನ್ನರ್ ಶ್ರುತಿ ಕೃಷ್ಣ ಬಂದಿದ್ದರು. ಇಂದು ಮನೆಗೆ ಹಿಂದಿನ ಸೀಸನ್ ನ ಮತ್ತಿಬ್ಬರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ಸ್ಪರ್ಧಿಯಾಗಿದ್ದ ಶುಭಾ ಪೂಂಜ ಮನೆಗೆ ಬಂದಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಆರು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರಂತ್ಯದ ಎಪಿಸೋಡ್ ನಡೆಸಿಕೊಡಲು ಇಬ್ಬರು ಬಂದಿರುವುದರಿಂದ ಡಬಲ್ ಎಲಿಮಿನೇಷನ್ ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.