ಬಿಬಿಕೆ9: ಅರುಣ್ ಸಾಗರ್ ಗೆ ಪೈಪೋಟಿ ಕೊಡ್ತಿದ್ದಾರೆ ಕಾವ್ಯಾ

ಮಂಗಳವಾರ, 25 ಅಕ್ಟೋಬರ್ 2022 (08:50 IST)
WD
ಬೆಂಗಳೂರು: ಮಂಗಳ ಗೌರಿ ಮದುವೆ ಖ್ಯಾತಿಯ ಕಾವ್ಯಾ ಶ್ರೀ ಗೌಡ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ಒದಗಿಸುತ್ತಿದ್ದಾರೆ.

ಕಾವ್ಯಾ ಮೊದಲು ಟಾಸ್ಕ್ ವಿಚಾರದಲ್ಲಿ ಮನೆಯವರ ದೃಷ್ಟಿಯಲ್ಲಿ ವೀಕ್ ಸ್ಪರ್ಧಿ ಎನಿಸಿದ್ದರು. ಆದರೆ ಈಗ ವೀಕ್ಷಕರನ್ನು ನಗಿಸುವ ಮೂಲಕ ಭರ್ಜರಿ ಮನರಂಜನೆ ಒದಗಿಸುತ್ತಿದ್ದಾರೆ.

ಸಹ ಸ್ಪರ್ಧಿಗಳ ಕಾಲೆಳೆದುಕೊಂಡು ಕಾವ್ಯಾ ವೀಕ್ಷಕರಿಗೆ ಖುಷಿಕೊಡುತ್ತಿದ್ದಾರೆ. ಈ ಮೂಲಕ ಮನರಂಜನೆ ವಿಚಾರದಲ್ಲಿ ಹಿರಿಯ ಸ್ಪರ್ಧಿ ಅರುಣ್ ಸಾಗರ್ ಗೆ ಪೈಪೋಟಿ ನೀಡುತ್ತಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ