ಹೊಸ ಅವತಾರದಲ್ಲಿ ಕಿರುತೆರೆಗೆ ಎಂಟ್ರಿ ಕೊಡಲಿರುವ ಭಾರತಿ ವಿಷ್ಣುವರ್ಧನ್
‘ಸೇವಂತಿ’ ಎನ್ನುವ ಹೊಸ ಧಾರವಾಹಿಯೊಂದರಲ್ಲಿ ಭಾರತಿ ವಿಷ್ಣುವರ್ಧನ್ ಬಣ್ಣ ಹಚ್ಚಲಿದ್ದಾರೆ. ಸೇವಂತಿ ಎನ್ನುವ ಹೆಣ್ಣುಮಗಳೊಬ್ಬಳ ಕತೆ ಹೊಂದಿರುವ ಈ ಧಾರವಾಹಿ ಫೆಬ್ರವರಿ 25 ರಿಂದ ರಾತ್ರಿ 7 ಕ್ಕೆ ಪ್ರಸಾರವಾಗಲಿದೆ.
ಬಹಳ ದಿನಗಳ ನಂತರ ಭಾರತಿ ವಿಷ್ಣುವರ್ಧನ್ ಬಣ್ಣ ಹಚ್ಚುತ್ತಿದ್ದು, ಈ ಧಾರವಾಹಿ ಮೂಲಕ ಮತ್ತೆ ವೀಕ್ಷಕರ ಮನೆಗೆ ತಲುಪುವ ನಿರೀಕ್ಷೆಯಲ್ಲಿದ್ದಾರೆ. ಅಂದ ಹಾಗೆ, ಈ ಧಾರವಾಹಿಯಲ್ಲಿ ನಾಯಕಿಯಾಗಿ ಪಲ್ಲವಿ ಗೌಡ ಮತ್ತು ನಾಯಕನಾಗಿ ಶಿಶಿರ್ ಕಾಣಿಸಿಕೊಳ್ಳಲಿದ್ದಾರೆ.