ಪಾಕ್ ಪರ ಮಾತನಾಡಿದ ಆರೋಪ: ಕಪಿಲ್ ಶರ್ಮಾ ಶೋನಿಂದ ನವಜೋತ್ ಸಿಂಗ್ ಸಿದುಗೆ ಗೇಟ್ ಪಾಸ್?!
ಭಾನುವಾರ, 17 ಫೆಬ್ರವರಿ 2019 (09:16 IST)
ಮುಂಬೈ: ಪುಲ್ವಾಮಾ ದಾಳಿ ಕುರಿತಾಗಿ ಮಾತನಾಡುವ ಪಾಕಿಸ್ತಾನದ ಪರವಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದು ಅವರನ್ನು ಕಪಿಲ್ ಶರ್ಮಾ ಶೋನಿಂದ ಕಿತ್ತೊಗೆಯಬೇಕು ಎಂದು ಒತ್ತಡ ಹೆಚ್ಚಾಗಿದೆ.
ಹಿಂದಿ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಸಿದು ಕಾಣಿಸಿಕೊಳ್ಳುತ್ತಾರೆ. ಆದರೆ ಪುಲ್ವಾಮಾ ದಾಳಿ ಬಗ್ಗೆ ಖಂಡಿಸುವಾಗ ಕೆಲವೇ ಕೆಲವು ವ್ಯಕ್ತಿಗಳು ಮಾಡಿದ ತಪ್ಪಿಗೇ ಒಂದು ಇಡೀ ದೇಶವನ್ನೇ ದೂರುವುದು ಸರಿಯೇ ಎಂದು ಪಾಕ್ ಪರವಾಗಿ ಸಿದು ಮಾತನಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿದು ಹೇಳಿಕೆಯ ಹಿನ್ನಲೆಯಲ್ಲಿ ಅವರನ್ನು ಕಪಿಲ್ ಶರ್ಮಾ ಶೋನಿಂದ ಕಿತ್ತೊಗೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಇದೀಗ ವಾಹಿನಿಯವರು ಶೋ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಸಿದು ಬದಲಿಗೆ ಬೇರೊಬ್ಬರ ವ್ಯಕ್ತಿಯನ್ನು ಕರೆತರುವ ಬಗ್ಗೆ ಚಾನೆಲ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ