ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಮುನ್ನ ಸ್ಪರ್ಧಿಗಳ ಹೆಸರುಗಳು ಬಯಲಾಗಿವೆ.
ಈ ಬಾರಿ ಡ್ರೋಣ್ ಪ್ರತಾಪ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಉರಗ ತಜ್ಞ ಸ್ನೇಕ್ ಶ್ಯಾಮ್, ನಟಿ ನಮ್ರತಾ ಗೌಡ, ವಿನಯ್ ಗೌಡ, ಗೌರೀಶ್ ಅಕ್ಕಿ, ಮಿಸ್ ಟ್ರಾನ್ಸ್ ಕ್ವೀನ್ ನೀತು ವನಜಾಕ್ಷಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, 777 ಚಾರ್ಲಿ ಖ್ಯಾತಿಯ ನಾಯಿ ಚಾರ್ಲಿ ದೊಡ್ಮನೆ ಪ್ರವೇಶಿಸುವುದು ಪಕ್ಕಾ ಆಗಿದೆ. ಇವರ ಜೊತೆಗೆ ಕೆಲವು ಹಳೆಯ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದಾರೆ. ಅವರು ಯಾರು ಎಂದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.
ಇಂದು ಸಂಜೆ 6 ರಿಂದ ಬಿಗ್ ಬಾಸ್ ಶೋಗೆ ಕಿಚ್ಚ ಸುದೀಪ್ ಚಾಲನೆ ನೀಡಲಿದ್ದಾರೆ. ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗುತ್ತದೆ. ಈ ಬಾರಿ ಮನೆಯೊಳಗೆ ಪ್ರವೇಶಿಸುವ ಮೊದಲೇ ಡ್ರೋಣ್ ಪ್ರತಾಪ್, ರಕ್ಷಕ್ ಮತ್ತು ವರ್ತೂರು ಸಂತೋಷ್ ಗೆ ಎಲಿಮಿನೇಷನ್ ಪರೀಕ್ಷೆ ಎದುರಾಗಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ನಲ್ಲಿ ಹೊಸ ಟ್ವಿಸ್ಟ್ ಗಳು ಗ್ಯಾರಂಟಿ ಎನ್ನಬಹುದು.