ಅಕ್ಟೋಬರ್ ನಲ್ಲಿ ಮೆಗಾ ಬಿಗ್ ಬಾಸ್ ಕನ್ನಡ ಶೋ

ಶನಿವಾರ, 3 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ 9 ನೇ ಸೀಸನ್ ಸದ್ಯದಲ್ಲೇ ಶುರುವಾಗಲಿದೆ.

ಇದೀಗ ಬಿಗ್ ಬಾಸ್ ಕನ್ನಡ ಶೋ ಒಟಿಟಿಯಲ್ಲಿ ನಡೆಯುತ್ತಿದೆ. ಈ ಶೋ ಫೈನಲ್ ಹಂತಕ್ಕೆ ತಲುಪಿದ್ದು, ಇನ್ನೇನು ಈ ತಿಂಗಳಲ್ಲಿ ಮುಗಿಯಲಿದೆ. ಇದಾದ ಬಳಿಕ ಟಿವಿಯಲ್ಲಿ ಎಂದಿನಂತೆ ಮೆಗಾ ಬಿಗ್ ಬಾಸ್ ಶೋ ನಡೆಯಲಿದೆ.

ಈ ಶೋ ಅಕ್ಟೋಬರ್ ನಲ್ಲಿ ಬಿಗ್ ಬಾಸ್ 9 ನೇ ಸೀಸನ್ ಶುರುವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಿಗ್ ಬಾಸ್ ಒಟಿಟಿ ಎಲ್ಲರಿಗೂ ತಲುಪುತ್ತಿಲ್ಲ ಎನ್ನುವ ಅಪವಾದವೂ ಇದೆ. ಹೀಗಾಗಿ ಟಿವಿಯಲ್ಲಿ ಬರುವ ಬಿಗ್ ಬಾಸ್ ಹೆಚ್ಚು ಜನಪ್ರಿಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ