ಬಿಗ್ ಬಾಸ್ ಕನ್ನಡ: ಫೈನಲ್ ಗೇರುವ ಅನುಪಮಾ ಕನಸು ಈಡೇರಲೇ ಇಲ್ಲ!

ಭಾನುವಾರ, 21 ಜನವರಿ 2018 (09:23 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿನಿಂದ ಈ ವಾರ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಇವರನ್ನು ಫೈನಲ್ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಅನುಪಮಾ ಫೈನಲ್ ಗೆ ಕೆಲವೇ ದಿನಗಳಿರುವಾಗ ಹೊರಬಿದ್ದಿದ್ದಾರೆ.
 

ಅನುಪಮಾ  ಅವರ ಕೆಲವು ವರ್ತನೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ವೀಕ್ಷಕರ ಪ್ರೀತಿ ಉಳಿಸಿಕೊಳ್ಳಲು ವಿಫಲವಾದ ಅನುಪಮಾ ಮನೆಯಿಂದ ಹೊರ ನಡೆಯಬೇಕಾಯಿತು.

ಇದೀಗ ಜಯರಾಮ್ ಕಾರ್ತಿಕ್,  ಶ್ರುತಿ ಪ್ರಕಾಶ್,  ಸಮೀರಾಚಾರ್ಯ, ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಉಳಿದುಕೊಂಡಿದ್ದಾರೆ. ಇವರಲ್ಲಿ ಫೈನಲ್ ಅಭ್ಯರ್ಥಿಗಳು ಯಾರು ಎನ್ನುವುದು ಮುಂದಿನ ವಾರ ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ