ಬಿಗ್ ಬಾಸ್ ಮನೆಯಿಂದ ಇಂದು ಹೊರಬರುವವರು ಯಾರು?

ಶನಿವಾರ, 26 ಅಕ್ಟೋಬರ್ 2019 (09:38 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಅಲ್ಲಿಗೆ ಇಂದು ಘಟಾನುಘಟಿ ಸ್ಪರ್ಧಿಯೊಬ್ಬರು ಹೊರಬರುವುದು ಗ್ಯಾರಂಟಿ ಅಂತಾಗಿದೆ.


ಬಿಗ್ ಬಾಸ್ ಮನೆಯಲ್ಲಿ ಇಂದು ವಾರದ ಕತೆ ಕಿಚ್ಚನ ಜತೆ ನಡೆಯಲಿದ್ದು, ಈ ವಾರ ನಾಮಿನೇಟ್ ಆದ ಆರು ಸ್ಪರ್ಧಿಗಳ ಪೈಕಿ ಒಬ್ಬರು ಹೊರ ಹೋಗಲಿದ್ದಾರೆ.

ದೀಪಿಕಾ ದಾಸ್, ಚಂದನ್ ಆಚಾರ್, ಚೈತ್ರಾ ಕೋಟೂರು, ಸುಜಾತ, ಪ್ರಿಯಾಂಕ ಮತ್ತು ಚೈತ್ರಾ ವಾಸುದೇವನ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಆಪಲ್ ಕಿತ್ತಾಟದಿಂದಾಗಿ ಚೈತ್ರಾ ಕೋಟೂರುಗೆ ವೀಕ್ಷಕರ ಅನುಕಂಪ ಸಿಕ್ಕಿದ್ದು, ಬಚಾವ್ ಆಗುವ ಸಾಧ್ಯತೆಯಿದೆ. ಆದರೆ ಚಂದನ್ ಆಚಾರ್, ಸುಜಾತ ಮತ್ತು ಚೈತ್ರಾ ವಾಸುದೇವನ್ ಮೇಲೆ ತೂಗುಗತ್ತಿಯಿದೆ. ಯಾರ ಪಾಲಿಗೆ ಇದು ಸಂಭ್ರಮದ ದೀಪಾವಳಿಯಾಗಲಿದೆ ಎನ್ನುವುದು ಇಂದು ಗೊತ್ತಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ