ಕಲರ್ಸ್ ಕನ್ನಡದಲ್ಲಿ ನಾಳೆ ಕಲರ್ ಫುಲ್ ನಾಯಕಿಯರ ಕಣ್ತುಂಬಿಕೊಳ್ಳಬಹುದು
ಶನಿವಾರ, 26 ಅಕ್ಟೋಬರ್ 2019 (09:15 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ನಾಯಕಿಯರೆಲ್ಲಾ ಒಟ್ಟಾಗಿ ಸೇರಿ ಮಜಾ ಮಾಡಿದ ಕಾರ್ಯಕ್ರಮ ಕಲರ್ ಫುಲ್ ನಾಯಕಿ. ಅದು ಹೇಗಿರುತ್ತೆ ಎಂಬ ಕುತೂಹಲವಿದ್ದರೆ ನಾಳೆ ಕಲರ್ ಫುಲ್ ನಾಯಕಿ ನೋಡಬಹುದು.
ಹೌದು, ಕಲರ್ಸ್ ಕನ್ನಡದಲ್ಲಿ ನಾಳೆ ಕಲರ್ ಫುಲ್ ನಾಯಕಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಳೆದ ವಾರ ಚಾಮರಾಜನಗರದಲ್ಲಿ ನಡೆದ ಕಲರ್ ಫುಲ್ ನಾಯಕಿ ಕಾರ್ಯಕ್ರಮದ ಪ್ರಸಾರ ನಾಳೆ ಮಧ‍್ಯಾಹ್ನ 3.30ಕ್ಕೆ ಇರಲಿದೆ.
ಎಲ್ಲಾ ಧಾರವಾಹಿಗಳ ನಾಯಕಿಯರ ಡ್ಯಾನ್ಸ್, ಮೋಜು, ಮಸ್ತಿ ಎಲ್ಲವೂ ಕಾರ್ಯಕ್ರಮದಲ್ಲಿರಲಿದೆ. ಸುಷ್ಮಾ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.