ಬಿಗ್ ಬಾಸ್ ಕನ್ನಡ: ಜಗನ್ ನಲ್ಲಿ ಈ ಬದಲಾವಣೆಗೆ ಕಾರಣವಾಯ್ತಾ ಜೆಕೆ ಸಹವಾಸ?!

ಗುರುವಾರ, 14 ಡಿಸೆಂಬರ್ 2017 (09:22 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದಾ ಸ್ಪರ್ಧಿಗಳ ಜತೆ ವಾದಕ್ಕೆ ನಿಲ್ಲುತ್ತಾ ಜಗಳಗಂಟ ಎಂದೇ ಕುಖ್ಯಾತಿಗೆ ಒಳಗಾಗಿದ್ದ ಜಗನ್ ಈ ವಾರ ಯಾಕೋ ಕೂಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಸದಾ ನಗುಮೊಗದಿಂದಿರುವ ಜೆಕೆ ಸಹವಾಸವಾ?
 

ಈ ವಾರ ಟಾಸ್ಕ್ ಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿಗಳನ್ನು ಜೋಡಿಗಳಾಗಿ ಮಾಡಿ ಕೋಳ ತೊಡಿಸಿಬಿಟ್ಟಿದ್ದಾರೆ. ಇವರಲ್ಲಿ ಜೆಕೆ ಮತ್ತು ಜಗನ್ ಇಬ್ಬರೂ ಒಂದು ಜೋಡಿ. ಅಷ್ಟೇ ಅಲ್ಲದೆ, ಈ ವಾರದ ಆರಂಭದಲ್ಲಿಯೇ ಜೆಕೆ, ಜಗನ್ ಬಳಿ ಮಾತನಾಡುವಾಗ ನಿನ್ನನ್ನು ಕಂಡ್ರೆ ನಂಗೆ ತುಂಬಾ ಪ್ರೀತಿ. ನೀನು ಚೆನ್ನಾಗಿಯೇ ಆಡ್ತೀಯಾ. ಆದ್ರೆ ವಿನಾಕಾರಣ ಕೋಪ ಮಾಡ್ಕೊಂಡು ಎಲ್ಲಾ ಹಾಳು ಮಾಡಿಕೊಳ್ತೀಯಾ ಎಂದು ಸಲಹೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಈ ವಾರ ಕೂಲ್ ಜೆಕೆ ಜತೆಗಿನ ಸಹವಾಸದ ಪ್ರಭಾವವೋ. ಈ ವಾರ ಜಗನ್ ನಗು ನಗುತ್ತಲೇ ಟಾಸ್ಕ್ ಮಾಡಿದ್ದಾರೆ. ತಮಾಷೆ ಮಾಡುತ್ತಾ ಕಾಲ ಕಳೆದಿದ್ದಾರೆ. ಅಂತೂ ಜೆಕೆ ಸಹವಾಸದಿಂದ ಆಂಗ್ರಿ ಯಂಗ್ ಮ್ಯಾನ್ ಜಗನ್ ಕೂಲ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ