ಬಿಗ್ ಬಾಸ್ ಕನ್ನಡ: ವೀಕ್ಷಕರ ಲೆಕ್ಕಾಚಾರ ತಪ್ಪಲಿಲ್ಲ! ರಿಯಾಜ್ ಭಾಷಾ ಉಳಿಯಲಿಲ್ಲ!
ಅಂತಿಮವಾಗಿ ರಿಯಾಜ್ ಮತ್ತು ಸಮೀರಾಚಾರ್ಯ ನಡುವೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಸ್ವತಃ ಸಮೀರಾಚಾರ್ಯ ರಿಯಾಜ್ ಉಳಿಯಲಿ ಎಂದರು. ರಿಯಾಜ್ ಕೂಡಾ ಸಮೀರ್ ಹೋಗಲಿ, ನಾನು ಉಳಿಯಬೇಕು ಎಂದರು. ಅದೇನೇ ಇದ್ದರೂ ಕೊನೆಗೆ ವೀಕ್ಷಕರ ಮತಗಳ ಆಧಾರದಲ್ಲಿ ರಿಯಾಜ್ ಮನೆಯಿಂದ ಹೊರನಡೆಯಬೇಕಾಯಿತು.