ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಜನವರಿ ಅಂತ್ಯಕ್ಕೆ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಆರಂಭವಾಗಬೇಕಿತ್ತು. ಆದರೆ ಅದೀಗ ಮಾರ್ಚ್ ಗೆ ಮುಂದೂಡಿಕೆಯಾಗಿದೆ.
ಮಾರ್ಚ್ ನಲ್ಲಿ ಶೋ ನಡೆಯುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ ವಾಹಿನಿ, ನಿರೂಪಕ ಕಿಚ್ಚ ಸುದೀಪ್ ಜೊತೆಗೂಡಿ ಇದರ ರೂಪುರೇಷೆ ಸಿದ್ಧಪಡಿಸಿದ್ದಾರೆ. ಮಾರ್ಚ್ ವೇಳೆಗೆ ಬಿಗ್ ಬಾಸ್ ಶುರುವಾಗಲಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರ ಶೋನಲ್ಲಿ ಭಾಗಿಯಾಗಲಿದ್ದಾರೆ.