ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಕ್ತಾಯಗೊಳ್ಳಲು ಇನ್ನು ಒಂದು ವಾರ ಬಾಕಿಯಿದೆ. ಈ ನಡುವೆ ಇಂದು ಅಂತಿಮ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಈ ವಾರ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಬಂದಿದ್ದಾರೆ.
ಇಷ್ಟು ದಿನ ಮನೆಯಲ್ಲಿದ್ದು ಇನ್ನೇನು ಫಿನಾಲೆಗೆ ಒಂದು ವಾರವಿದೆ ಎನ್ನುವಷ್ಟರಲ್ಲಿ ಎಲಿಮಿನೇಟ್ ಆಗುವುದು ನಿಜಕ್ಕೂ ದುರದೃಷ್ಟಕರ. ಇಂತಹ ದುರದೃಷ್ಟ ಶಮಂತ್ ಗೌಡ ಮತ್ತು ಶುಭಾ ಪೂಂಜಾ ಅವರದ್ದಾಗಿದೆ. ಈ ವಾರ ಇಬ್ಬರೂ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಬಂದಿದೆ.
ಈ ವಾರ ಮನೆಯಿಂದ ಹೊರಹೋಗಲು ಅರವಿಂದ್, ಮಂಜು ಪಾವಗಡ, ಶಮಂತ್ ಗೌಡ, ಪ್ರಶಾಂತ್ ಸಂಬರಗಿ, ವೈಷ್ಠವಿ ಗೌಡ, ದಿವ್ಯಾ ಸುರೇಶ್, ಶುಭಾಪೂಂಜಾ ನಾಮಿನೇಟ್ ಆಗಿದ್ದರು.