ಬಿಗ್ ಬಾಸ್: ಸಿಹಿ ಕಹಿ ಚಂದ್ರುಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಸೋಮವಾರ, 27 ನವೆಂಬರ್ 2017 (09:38 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿವೇದಿತಾಗೆ ಕ್ಯಾಪ್ಟನ್ ಶಿಪ್ ಸಿಗಲು ತಪ್ಪು ಉತ್ತರ ಹೇಳಿದ್ದೆ ಎಂದ ಸಿಹಿ ಕಹಿ ಚಂದ್ರುಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
 

ಕಳೆದ ವಾರ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಿ ಹೆಚ್ಚು ಸರಿ ಉತ್ತರ ಕೊಟ್ಟವರಿಗೆ ವಾರದ ನಾಯಕತ್ವ ಸಿಕ್ಕಿತ್ತು. ಅದರಂತೆ ನಿವೇದಿತಾ ಕ್ಯಾಪ್ಟನ್ ಆದರು. ಆದರೆ ತನಗೆ ಉತ್ತರ ಗೊತ್ತಿದ್ದರೂ ನೀನು ಕ್ಯಾಪ್ಟನ್ ಆಗಬೇಕೆಂದು ತಪ್ಪು ಉತ್ತರ ನೀಡಿದ್ದೆ ಎಂದು ಚಂದ್ರು ಹೇಳಿಕೊಂಡಿದ್ದನ್ನು ಸುದೀಪ್ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.

ಕಿಚನ್ ನಲ್ಲಿ, ಟಾಸ್ಕ್ ಮಾಡುವಾಗ ಎರಡೆರಡು ಬಾರಿ ನಿವೇದಿತಾಗಾಗಿ ತಪ್ಪು ಉತ್ತರ ಕೊಟ್ಟೆ ಎಂದಿದ್ರಿ. ಆದ್ರೆ ಎಲ್ಲರೂ ಕ್ಯಾಪ್ಟನ್ ಶಿಪ್ ನ್ನು ತಾವೇ ಗಳಿಸಿಕೊಳ್ಳಬೇಕು ವಿನಃ ಇನ್ನೊಬ್ಬರು ದಾನ ಮಾಡಬಾರದು. ಒಂದು ವೇಳೆ ನೀವು ಬೇಕೆಂದೇ ತಪ್ಪು ಉತ್ತರ ಕೊಟ್ಟಿದ್ದರೆ ಅದು ಬಿಗ್ ಬಾಸ್ ನಿಯಮದ ವಿರುದ್ಧ ಅಲ್ವೇ? ಫೇರ್ ಗೇಮ್ ಆಡಿ ಎಂದು ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ