ಬಿಗ್ ಬಾಸ್: ಜೆಕೆ-ಶ್ರುತಿ ನಡುವೆ ಲವ್ ಆಗಿದ್ಯಾ?! ಏನು ಹೇಳಿದ್ರು ಶ್ರುತಿ?

ಶನಿವಾರ, 25 ನವೆಂಬರ್ 2017 (10:30 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೂಪರ್ ಸ್ಟಾರ್ ಜೆಕೆ ಮತ್ತು ಶ್ರುತಿ ನಡುವೆ ಏನೋ ಇದೆಯಾ? ಜೆಕೆ ಸ್ಪೆಷಲ್ ಗ್ರೀಟಿಂಗ್ ಕಾರ್ಡ್ ಮಾಡಿ ಕೊಟ್ಟಿದ್ದರ ಹಿಂದೆ ಸಮ್ ಥಿಂಗ್ ಸಮ್ ಥಿಂಗ್ ಇದೆಯಾ?
 

ಜನ ಕೇಳೋ ಪ್ರಶ್ನೆಯನ್ನು ಬಿಗ್ ಬಾಸ್ ಮನೆಗೆ ಬಂದ ನಿರಂಜನ್ ಗ್ರೀಟಿಂಗ್ ಕಾರ್ಡ್ ನೋಡುತ್ತಾ ಈ ಪರೋಕ್ಷವಾಗಿ ಶ್ರುತಿ ಕಾಲೆಳೆದರು. ಅಯ್ಯೋ ರಾಮ ಹಂಗೇನೂ ಇಲ್ಲಪ್ಪಾ.. ಜಸ್ಟ್ ಫ್ರೆಂಡ್ ಶಿಪ್ ಅಷ್ಟೇ ಎಂದು ಶ್ರುತಿ ಸ್ಪಷ್ಟಪಡಿಸಿದರು.

ಹಾಗಿದ್ದರೂ ಫ್ರೆಂಡ್ ಶಿಪ್ ನಲ್ಲೂ ಪ್ರೀತಿ ಇರಬಾರದು ಎಂದೇನಿಲ್ಲವಲ್ಲಾ ಎಂದು ನಿರಂಜನ್ ಲೈಟಾಗಿ ಕಾಲೆಳೆದರು. ಅದಕ್ಕೆ ಶ್ರುತಿ ಕೂಡಾ ಹೌದು.. ಫ್ರೆಂಡ್ ಶಿಪ್ ನಲ್ಲೂ ಪ್ರೀತಿ ಇರಬಹುದು. ಆದರೆ ನಮಗೆ ಹಾಗೇನೂ ಇಲ್ಲ ಎಂದು ತೇಪೆ ಹಾಕಲು ನೋಡಿದರು. ಇದರ ನಡುವೆ ಏನೋ ಇದೆ ಎಂದು ನಿರಂಜನ್ ಮತ್ತು ಜಯ ಶ್ರೀನಿವಾಸ್ ಹಾಡುತ್ತಾ ಶ್ರುತಿ ಕಾಲೆಳೆದರು. ಸ್ಕೂಲ್ ಟಾಸ್ಕ್ ನಲ್ಲಿ ಜೆಕೆ ಶ್ರುತಿಯಾಗಿ ಹೃದಯದಾಕಾರದ ಗ್ರೀಟಿಂಗ್ ಕಾರ್ಡ್ ಮಾಡಿಕೊಟ್ಟಿದ್ದರು. ಅದನ್ನು ಶ್ರುತಿ ಜೋಪಾನವಾಗಿ ಬೆಡ್ ಬಳಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ