ಸಂತ್ರಸ್ತರ ಹಸಿವು ನೀಗಿಸುತ್ತಿರುವ ಕಿರುತೆರೆ ನಟ ಕಿರಣ್ ರಾಜ್ ಮತ್ತು ಬಳಗ
ಎಷ್ಟೋ ಮನೆಗಳಲ್ಲಿ ಕೊರೋನಾ ಸೋಂಕಿತರಾಗಿ ಹೊರಗೆ ಹೋಗಲಾರದೇ ಮನೆಯಲ್ಲೂ ಅಡುಗೆ ಮಾಡಿಕೊಳ್ಳಲಾಗದ ಸ್ಥಿತಿಯಿದೆ. ಇನ್ನು ಹಲವರು ಬೇರೆ ಊರುಗಳಿಗೆ ಇಲ್ಲಿ ಬಂದು ಈಗ ಕೆಲಸವಿಲ್ಲದೇ ಊಟಕ್ಕಾಗಿ ಪರದಾಡುತ್ತಿರುವ ಕಾರ್ಮಿಕರಿದ್ದಾರೆ. ಅಂತಹವರಿಗೆ ಊಟ ಒದಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ನನ್ನ ಜೊತೆ ಊಟ ಸರಬರಾಜು ಮಾಡಲು ಸ್ವಯಂ ಸೇವಕರಾಗಿ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.