ಬಿಗ್ ಬಾಸ್ ಕನ್ನಡ 10 ಸೀಸನ್ ಗೆ ಬರಲಿದೆ ಚಾರ್ಲಿ!

ಭಾನುವಾರ, 24 ಸೆಪ್ಟಂಬರ್ 2023 (10:04 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 10 ನೇ ಸೀಸನ್ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ವಿಶೇಷತೆಯಿಂದ ಕೂಡಿರಲಿದೆ ಎಂದು ಈಗಾಗಲೇ ಕಲರ್ಸ್ ವಾಹಿನಿ ಹೇಳಿತ್ತು.

ಅದರಂತೆ ಆ ವಿಶೇಷತೆ ಏನು ಎಂಬುದನ್ನು ಕಲರ್ಸ್ ವಾಹಿನಿ ಹೇಳಿದೆ.  ಬಿಗ್ ಬಾಸ್ 10 ನೇ ಸೀಸನ್ ನಲ್ಲಿ ಈ ಬಾರಿ 777 ಚಾರ್ಲಿ ಸಿನಿಮಾ ಖ್ಯಾತಿಯ ಮುದ್ದು ನಾಯಿ ಚಾರ್ಲಿ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಲಿದೆ!

ಇದು ಈ ಬಾರಿಯ ವಿಶೇಷತೆ. ಚಾರ್ಲಿ ಸಿನಿಮಾದಲ್ಲಿ ತನ್ನ ಅಭಿನಯದಿಂದ ಎಲ್ಲರ ಮನಗೆದ್ದಿತ್ತು. ಈಗ ರಿಯಾಲಿಟಿ ಶೋಗೆ ಎಂಟ್ರಿ  ಕೊಡುವ ಮೂಲಕ  ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಲಿದೆ. ಚಾರ್ಲಿ ಮನೆ ಪ್ರವೇಶಿಸಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೇ ಪ್ರತಿಕ್ರಿಯಿಸಿರುವ ನೆಟ್ಟಿಗರು ಚಾರ್ಲಿಗಾಗಿಯೇ ಶೋ ನೋಡುವುದಾಗಿ ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ