ಹಿಟ್ ಆಂಡ್ ರನ್ ಕೇಸ್ ನಲ್ಲಿ ಕಾಮಿಡಿ ನಟ ಚಂದ್ರಪ್ರಭಾ

ಬುಧವಾರ, 6 ಸೆಪ್ಟಂಬರ್ 2023 (09:10 IST)
Photo Courtesy: Twitter
ಬೆಂಗಳೂರು: ಕಲರ್ಸ್ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಶೋ ಖ್ಯಾತಿಯ ಕಾಮಿಡಿ ನಟ ಚಂದ್ರಪ್ರಭಾ ಜಿ. ಹಿಟ್ ಆಂಡ್ ರನ್ ಆರೋಪಕ್ಕೊಳಗಾಗಿದ್ದಾರೆ.

ಚಿಕ್ಕಮಗಳೂರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಕ ಚಂದ್ರಪ್ರಭಾ ಅವರ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಚಾಲಕನನ್ನು ವಿಚಾರಿಸುವ ಗೋಜಿಗೂ ಹೋಗದೇ ಚಂದ್ರಪ್ರಭಾ ಕಾರು ಸ್ಥಳದಿಂದ ಪರಾರಿಯಾಗಿದೆ.

ಈ ವೇಳೆ ಸ್ವತಃ ಚಂದ್ರಪ್ರಭಾ ಅವರೇ ಕಾರು ಓಡಿಸುತ್ತಿದ್ದರೋ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ದ್ವಿಚಕ್ರ ವಾಹನ ಸವಾರನ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ