ಸೀತಾರಾಮ ನಟ ಗಗನ್ ಚಿನ್ನಪ್ಪ ಹೆಸರಿನಲ್ಲಿ ಮೋಸ: ಎಚ್ಚರಿಸಿದ ನಟ
ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದುಕೊಂಡು ಬಬ್ಬು ಖಾನ್ ಎಂಬ ವ್ಯಕ್ತಿಯೊಬ್ಬ ಹಣ ಕೇಳುತ್ತಿರುವುದು ಗಗನ್ ಗಮನಕ್ಕೆ ಬಂದಿದೆ.
ಹೀಗಾಗಿ ನನ್ನ ಹೆಸರಿನಲ್ಲಿ ಯಾರೋ ಫೇಕ್ ಐಡಿ ಕ್ರಿಯೇಟ್ ಮಾಡಿ ಹಣ ಕೇಳುತ್ತಿದ್ದಾರೆ. ದಯವಿಟ್ಟು ಯಾರೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಈ ರೀತಿ ವಂಚಿಸುವುದು ಇದೇ ಮೊದಲೇನಲ್ಲ. ಆ ಸಾಲಿಗೆ ಗಗನ್ ಕೂಡಾ ಸೇರಿಕೊಂಡಿದ್ದಾರೆ.