ಧಾರವಾಹಿ ಹಾಡುಗಳಿಗೂ ಸಿನಿಮಾ ಕಳೆ: ಯಾವ ಸೀರಿಯಲ್ ಸಾಂಗ್ ನಿಮ್ಮ ಫೇವರಿಟ್?

ಬುಧವಾರ, 2 ಆಗಸ್ಟ್ 2023 (09:20 IST)
Photo Courtesy: facebook
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳು ಸಿನಿಮಾಗೆ ಸರಿಸಮವಾಗಿ ಚಿತ್ರೀಕರಣವಾಗುತ್ತಿದೆ. ಜೊತೆಗೆ ಧಾರವಾಹಿಗಳಲ್ಲೂ ಹಾಡುಗಳು ಹಿಟ್ ಆಗುತ್ತಿವೆ.

ಸಾಮಾನ್ಯವಾಗಿ ಧಾರವಾಹಿಗಳಿಗೆ ಯಾವುದೋ ಸಿನಿಮಾ ಹಿನ್ನಲೆ ಸಂಗೀತವನ್ನು ಬಳಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಧಾರವಾಹಿಗಳಿಗೆಂದೇ ಪ್ರತ್ಯೇಕ ಹಾಡುಗಳನ್ನು ಮಾಡಲಾಗುತ್ತಿದೆ.

ಮುಕ್ತ ಧಾರವಾಹಿ ಕಾಲದಿಂದಲೂ ಟೈಟಲ್ ಟ್ರ್ಯಾಕ್ ಗಳು ಜನರ ಗಮನ ಸೆಳೆದಿವೆ. ಆದರೆ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಸಿನಿಮಾ ಹಾಡಿನ ಮಟ್ಟಿಗೆ ಸೂಪರ್ ಹಿಟ್ ಆಗಿತ್ತು. ಅದಾದ ಬಳಿಕ ಬರುತ್ತಿರುವ ಪ್ರತೀ ಧಾರವಾಹಿ ತಂಡಗಳೂ ಹಾಡಿನ ಬಗ್ಗೆಯೂ ವಿಶೇಷ ಗಮನ ನೀಡುತ್ತಿವೆ.

ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಸಖಿಯೇ ಸಖಿಯೇ ಹಾಡು ಬ್ರೋ ಗೌಡ ಧ್ವನಿಯಲ್ಲಿ ಸೂಪರ್ ಹಿಟ್ ಆಗಿತ್ತು. ಶ್ರೀರಸ್ತು ಶುಭಮಸ್ತು ಧಾರವಾಹಿಯ ಸಾಥಿ ಜೊತೆಗಾತಿ ಇದು ತಾಜಾ ಮಾಹಿತಿ ಎಂಬ ರೊಮ್ಯಾಂಟಿಕ್ ಹಾಡು ಯಾವುದೋ ಸಿನಿಮಾ ಹಾಡಿನಂತಿಯದೆಯಲ್ಲಾ ಎಂದು ವೀಕ್ಷಕರನ್ನು ದಂಗುಬಡಿಸಿತ್ತು. ಜೀ ಕನ್ನಡ  ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ಸೀರಿಯಲ್ ಗಾಗಿಯೇ ಕೆಲವು ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸಿತು. ರೊಮ್ಯಾಂಟಿಕ್, ಸೆಂಟಿಮೆಂಟ್ ಹಾಡಿನ ಜೊತೆಗೆ ಟೈಟಲ್ ಟ್ರ್ಯಾಕ್ ಕೂಡಾ ಬಿಡುಗಡೆ ಮಾಡಿತು. ಸೀತಾರಾಮ ಧಾರವಾಹಿಯ ಟೈಟಲ್ ಹಾಡು ಯಾವುದೋ ಭಾವಗೀತೆಯಂತೆ ಸುಮಧುರವಾಗಿದೆ. ಇದೀಗ ಅಮೃತಧಾರೆ ಧಾರವಾಹಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸೀರಿಯಲ್ ಗಾಗಿಯೇ ಮಾಡಿರುವ ಹಾಡುಗಳ ಜ್ಯೂಕ್ ಬಾಕ್ಸ್ ಬಿಡುಗಡೆ ಮಾಡಿದೆ. ಹೀಗಾಗಿ ಈಗ ಸಿನಿಮಾ ಹಾಡುಗಳಂತೆ ಧಾರವಾಹಿ ಹಾಡುಗಳೂ ಜನರ ಗಮನ ಸೆಳೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ