ಬಿಗ್ ಬಾಸ್ ನಲ್ಲಿ ಮಹಿಳೆಯರ ತಾರತಮ್ಯ ನಡೆಯುತ್ತಿದೆಯೇ?!

ಬುಧವಾರ, 24 ಮಾರ್ಚ್ 2021 (09:12 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮಹಿಳೆಯರ ಮೇಲೆ ತಾರತಮ್ಯದ ಆರೋಪ ಕೇಳಿಬಂದಿದೆ. ಇದನ್ನು ಮಾಡಿರುವುದೂ ಮನೆಯೊಳಗಿನ ಮಹಿಳಾ ಸ್ಪರ್ಧಿಗಳೇ.



Photo Courtesy: Facebook
ಪ್ರತೀ ಬಾರಿಯೂ ಪುರುಷ ಸ್ಪರ್ಧಿಗಳೇ ಬಿಗ್ ಬಾಸ್ ವಿನ್ ಆಗುವುದು ಏಕೆ? ನಟಿ ಶ್ರುತಿ ಅವರನ್ನು ಬಿಟ್ಟರೆ ಇದುವರೆಗೆ ನಡೆದ ಏಳು ಸೀಸನ್ ಗಳಲ್ಲಿ ಆರು ಬಾರಿಯೂ ಪುರುಷರೇ ಗೆದ್ದಿದ್ದಾರೆ. ಪ್ರತೀ ಬಾರಿ ಟಾಸ್ಕ್ ವಿಚಾರದಲ್ಲಿ ಪುರುಷರಿಗೆ ಅನುಕೂಲವಾಗುವಂತಹ ಟಾಸ್ಕ್ ಗಳೇ ಇರುತ್ತವೆ. ಮಹಿಳಾ ಸ್ಪರ್ಧಿಗಳೂ ಪುರುಷ ಸ್ಪರ್ಧಿಗಳನ್ನೇ ಸ್ಟ್ರಾಂಗ್, ಫೇವರಿಟ್ ಎಂದು ಮೇಲೆತ್ತುತ್ತಾರೆ.

ಆದರೆ ಮಹಿಳೆಯರು ಯಾವತ್ತೂ ಮೇಲೆ ಬರೋದೇ ಇಲ್ಲ. ಹೀಗಂತ ಬಿಗ್ ಬಾಸ್ ಸ್ಪರ್ಧಿಗಳಾದ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಚಂದ್ರಕಲಾ ಮೋಹನ್, ವೈಷ್ಣವಿ ಗೌಡ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನಾವು ಮಹಿಳೆಯರು ಸ್ಟ್ರಾಂಗ್ ಆಗಬೇಕು. ಯಾಕೆ ಯಾವತ್ತೂ ಪುರುಷರನ್ನೇ ಮೇಲೆತ್ತಿಡಬೇಕು. ನಾವೂ ಕ್ಯಾಪ್ಟನ್ ಆಗೋದು ಬೇಡ್ವಾ? ಈ ಮೂರು ವಾರಗಳಲ್ಲಿ ಹೊರ ಹೋದ ಎಲ್ಲಾ ಸ್ಪರ್ಧಿಗಳೂ ಮಹಿಳೆಯರೇ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಾವು ಒಗ್ಗಟ್ಟಾಗಬೇಕು ಎಂದು ಈ ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ