ಸೀರಿಯಲ್ ನಟಿಯ ಉಳಿಸಲು ಆನ್ ಲೈನ್ ಕಾಂಪೈನ್ ಶುರು ಮಾಡಿಕೊಂಡ ಅಭಿಮಾನಿಗಳು

ಸೋಮವಾರ, 12 ಜುಲೈ 2021 (10:33 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ‘ಜೊತೆ ಜೊತೆಯಲಿ’ ತಂಡದಿಂದ ನಾಯಕಿ ಮೇಘಾ ಶೆಟ್ಟಿ ಹೊರಬಿದ್ದಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆಯೇ ಅಭಿಮಾನಿಗಳು ಆನ್ ಲೈನ್ ಕಾಂಪೈನ್ ಶುರು ಮಾಡಿಕೊಂಡಿದ್ದಾರೆ.


ಅನು ಸಿರಿಮನೆ ಪಾತ್ರ ಮಾಡುತ್ತಿದ್ದ ಮೇಘಾ ಶೆಟ್ಟಿ ಸೀರಿಯಲ್ ನಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಅವರೇ ಅನುಸಿರಿಮನೆಯಾಗಿ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಪಾತ್ರ ಬದಲಾವಣೆ ಮಾಡಬಾರದು ಎಂದು ಆನ್ ಲೈನ್ ನಲ್ಲಿ ಕಾಂಪೈನ್ ಶುರು ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇದುವರೆಗೆ ಧಾರವಾಹಿ ತಂಡವಾಗಲೀ, ಮೇಘಾ ಶೆಟ್ಟಿಯಾಗಲೀ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮೇಘಾ ಧಾರವಾಹಿಯಿಂದ ಹೊರಬಂದಿದ್ದು ನಿಜ ಎಂದು ಬಲ್ಲ ಮೂಲಗಳೇ ಹೇಳಿವೆ. ಆದರೆ ಇದೀಗ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಒತ್ತಾಯ ಮಾಡಿದ ಕಾರಣಕ್ಕೆ ಅವರ ನಿರ್ಧಾರ ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ