ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಧಾರವಾಹಿ ಟಿಆರ್ ಪಿ ಏನಾಗಿದೆ ಗೊತ್ತಾ?
ಇದೀಗ ಧಾರವಾಹಿಯ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಹೊರನಡೆದ ಮೇಲೆ ಧಾರವಾಹಿಯ ಟಿಆರ್ ಪಿ ಕತೆ ಏನಾಗಿದೆ ಎಂಬುದು ಇಂದು ಬಹಿರಂಗವಾಗಿದೆ. ಟಿಆರ್ ಪಿ ನೋಡಿದ ವೀಕ್ಷಕರಿಗೆ ಶಾಕ್ ಆಗಿದೆ.
ಅನಿರುದ್ಧ್ ಹೊರನಡೆದ ಮೇಲೆ ಟಿಆರ್ ಪಿ ಇಳಿಕೆಯಾಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಅದರಂತೆ ಕಳೆದ ವಾರ ಐದನೇ ಸ್ಥಾನದಲ್ಲಿದ್ದ ಧಾರವಾಹಿ ಆರನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈ ವಾರದ ಟಿಆರ್ ಪಿ ವರದಿ ನೋಡಿದ ವೀಕ್ಷಕರಿಗೇ ಶಾಕ್ ಆಗಿದ್ದು ದಿಡೀರ್ ಎರಡು ಸ್ಥಾನ ಜಿಗಿದು 7.1 ಟಿಆರ್ ಪಿ ಅಂಕಗಳೊಂದಿಗೆ ಧಾರವಾಹಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಹಲವು ದಿನಗಳ ಬಳಿಕ ಧಾರವಾಹಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಆ ಮೂಲಕ ವಿವಾದಗಳು ಧಾರವಾಹಿ ತಂಡಕ್ಕೆ ವೀಕ್ಷಕರ ಸಂಖ್ಯೆ ಕಡಿಮೆ ಮಾಡಿಲ್ಲ.