ಡಬ್ಬಿಂಗ್ ಧಾರವಾಹಿಗಳ ವಿರುದ್ಧ ಕಿರುತೆರೆ ಕಲಾವಿದರಿಂದ ಸಚಿವ ಆರ್ ಅಶೋಕ್ ಗೆ ದೂರು

ಸೋಮವಾರ, 15 ಜೂನ್ 2020 (10:20 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಇದೀಗ ಡಬ್ಬಿಂಗ್ ಧಾರವಾಹಿಗಳದ್ದೇ ಕಾರುಬಾರು. ಬಹುತೇಕ ಕನ್ನಡ ಮೂಲದ ಕಾರ್ಯಕ್ರಮಗಳನ್ನು ಅರ್ಧಕ್ಕೇ ನಿಲ್ಲಿಸಿ ಡಬ್ಬಿಂಗ್ ಧಾರವಾಹಿಗಳಿಗೆ ಎಲ್ಲಾ ಚಾನೆಲ್ ಗಳು ಅವಕಾಶ ನೀಡುತ್ತಿವೆ.


ಇದರ ಬಗ್ಗೆ ಇದೀಗ ಕನ್ನಡ ಕಲಾವಿದರು ಸಿಡಿದೆದ್ದಿದ್ದು, ಸಚಿವ ಆರ್. ಅಶೋಕ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿನ್ನೆ ಮುಖ್ಯಮಂತ್ರಿ ಚಂದ್ರು, ಗಿರೀಶ್ ಕಾಸರವಳ್ಳಿ, ಬಿ ಸುರೇಶ್, ದತ್ತಣ್ಣ ಸೇರಿದಂತೆ ಹಿರಿಯ ಕಲಾವಿದರು, ನಟ-ನಟಿಯರು ಸಭೆ ಸೇರಿದ್ದು, ಈ ಸಭೆಯಲ್ಲಿ ಸಚಿವ ಆರ್. ಅಶೋಕ್ ಗೆ ಡಬ್ಬಿಂಗ್ ಧಾರವಾಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಡಬ್ಬಿಂಗ್ ಧಾರವಾಹಿಗಳಿಂದಾಗಿ ಕನ್ನಡ ಕಲಾವಿದರು, ತಂತ್ರಜ್ಞರಿಗೆ ಕೆಲಸವಿಲ್ಲದಂತಾಗಿದೆ. ನಮ್ಮ ನೆಲದಲ್ಲಿ ನಮ್ಮವರಿಗೇ ಉದ್ಯೋಗವಿಲ್ಲದಂತಾದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿದೆ. ಸಚಿವ ಅಶೋಕ್ ಕೂಡಾ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ