ಡಬ್ಬಿಂಗ್ ಗೆ ನಲುಗಿದ ಕಿರುತೆರೆ: ಕನ್ನಡ ಕಲಾವಿದರಿಗೆ ಸಂಕಷ್ಟ
ಈಗ ಕನ್ನಡದ ಜನಪ್ರಿಯ ಧಾರವಾಹಿಗಳನ್ನೇ ಪ್ರಸಾರ ನಿಲ್ಲಿಸಿ ಬಹುತೇಕ ಡಬ್ಬಿಂಗ್ ಧಾರವಾಹಿಗಳಿಗೆ ಜಾಗ ಮಾಡಿಕೊಡಲಾಗುತ್ತಿದೆ. ಇದು ಸ್ಥಳೀಯ ಕಲಾವಿದರ ಅನ್ನ ಕಿತ್ತುಕೊಂಡಂತೆ. ಈ ಬಗ್ಗೆ ಹಲವು ಕಲಾವಿದರು ತಮ್ಮೊಳಗೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸಂಘಟಿತ ಹೋರಾಟವಿಲ್ಲದೇ ಅನ್ಯಾಯ ಸರಿಹೋಗದು. ಕನ್ನಡ ಟಿವಿ ಮಾರುಕಟ್ಟೆಗೆ ಇದು ಅಪಾಯಕಾರಿ ಬೆಳವಣಿಗೆ.