ಟಿಆರ್ ಪಿ ಹೆಚ್ಚಿಸುವ ಹೊಸ ಶೋಗಳಿಗೆ ಕಿರುತೆರೆ ಹುಡುಕಾಟ

ಭಾನುವಾರ, 24 ಮೇ 2020 (09:14 IST)
ಬೆಂಗಳೂರು: ಕೊರೋನಾದಿಂದಾಗಿ ಇಷ್ಟು ದಿನ ನೀರಸವಾಗಿದ್ದ ಕಿರುತೆರೆ ವಾಹಿನಿಗಳು ಈಗ ಮತ್ತೆ ಪುನರಾರಂಭದ ಸಂಭ್ರಮದಲ್ಲಿದೆ. ಆದರೆ ಈಗ ಟಿಆರ್ ಪಿ ಹೆಚ್ಚಿಸುವ ಹೊಸ ತಲೆನೋವು ಶುರುವಾಗಿದೆ.


ಈಗಾಗಲೇ ಕನ್ನಡದ ಬಹುತೇಕ ವಾಹಿನಿಗಳು ಟಿಆರ್ ಪಿಯಿಲ್ಲದ ಧಾರವಾಹಿಗಳನ್ನು ಸ್ಥಗಿತಗೊಳಿಸಿವೆ. ಇದೀಗ ಟಿಆರ್ ಪಿ ಹೆಚ್ಚಿಸುವ ಹೊಸ ಶೋ, ಧಾರವಾಹಿಗಳಿಗಾಗಿ ಪ್ರಯತ್ನ ನಡೆಸಿವೆ. ಲಾಕ್ ಡೌನ್ ಕಿರುತೆರೆಯ ಆದಾಯಕ್ಕೆ ಪೆಟ್ಟು ನೀಡಿದೆ. ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ನಾಳೆಯಿಂದ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ವಾರದಿಂದ ಕಿರುತೆರೆ ಚಟುವಟಿಕೆಗಳು ಹೊಸ ಎಪಿಸೋಡ್ ಗಳೊಂದಿಗೆ ಗರಿಗೆದರಲಿವೆ. ಜೀ ಕನ್ನಡ ವಾಹಿನಿ ಈಗಾಗಲೇ ಆಂಕರ್ ಅನುಶ್ರೀ ಜತೆ ‘ಕಾಫಿ ವಿತ್ ಅನು’ ಶೋ ಮಾಡುವ ಪ್ರಕಟಣೆ ನೀಡಿದೆ. ಇದೇ ಹಾದಿಯಲ್ಲಿ ಇತರ ಚಾನೆಲ್ ಗಳೂ ಲಾಕ್ ಡೌನ್ ನ್ನು ಗುರಿಯಾಗಿಟ್ಟುಕೊಂಡು ಹೊಸ ಬಗೆಯ ಕಾರ್ಯಕ್ರಮ ನೀಡುವ ಸಾಧ‍್ಯತೆಯಿದೆ. ಏನೇ ಆದರೂ ಸರಿ, ಮತ್ತೆ ಮೊದಲಿನಂತೆ ಆರ್ಥಿಕವಾಗಿಯೂ, ಜನಪ್ರಿಯತೆಯಲ್ಲೂ ಮರಳಿ ಹಳಿಗೆ ಬರಲು ಕಿರುತೆರೆ ಹೆಣಗಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ