ಇದ್ದಕ್ಕಿದ್ದಂತೆ ಬಂದ್ ಆದ ಕಲರ್ಸ್ ಸೂಪರ್! ಹಲವು ಜನಪ್ರಿಯ ಧಾರವಾಹಿಗಳು ಬಂದ್

ಶುಕ್ರವಾರ, 15 ಮೇ 2020 (09:11 IST)
ಬೆಂಗಳೂರು: ಲಾಕ್ ಡೌನ್ ವೇಳೆ ವೀಕ್ಷಕರಿಗೆ ಕಲರ್ಸ್ ಸೂಪರ್ ವಾಹಿನಿ ಶಾಕ್ ಕೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ವಾಹಿನಿ ಆಫ್ ಏರ್ ಆಗಲಿದೆ.


ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಾಂಗಲ್ಯಂ ತಂತು ನಾನೇನ’, ‘ಭೂಮಿ ತಾಯಾಣೆ’, ‘ಸಿಲ್ಲಿ ಲಲ್ಲಿ’ ಧಾರವಾಹಿಗಳು ಪ್ರಸಾರ ನಿಲ್ಲಿಸಿವೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದರ ನಿಜ ಕಾರಣ ಈಗ ಬಯಲಾಗಿದೆ.

ಸ್ವತಃ ಚಾನೆಲ್ಲೇ ಬಂದ್ ಆಗುತ್ತಿದ್ದು, ಇದೇ ಕಾರಣಕ್ಕೆ ಧಾರವಾಹಿಗಳೂ ಪ್ರಸಾರ ನಿಲ್ಲಿಸಿವೆ. ಇನ್ನು, ಕೆಲವು ದಿನಗಳ ಬಳಿಕ ಹೊಸ ರೂಪದೊಂದಿಗೆ ಹೊಸ ಧಾರವಾಹಿ, ಕಾರ್ಯಕ್ರಮಗಳೊಂದಿಗೆ ಕಲರ್ಸ್ ಸೂಪರ್ ಪ್ರಸಾರವಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ