ಇಂದು ಟಿವಿ ವೀಕ್ಷಕರಿಗೆ ‘ಕಿಸ್’ ಡೇ!

ಭಾನುವಾರ, 26 ಜನವರಿ 2020 (08:59 IST)
ಬೆಂಗಳೂರು: ವೀಕೆಂಡ್ ಬಂತೆಂದರೆ ಸಾಕು, ಟಿವಿ ವಾಹಿನಿಗಳು ತಮ್ಮ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಹೊಸ ಹೊಸ ಶೋಗಳೊಂದಿಗೆ ಬರುತ್ತವೆ. ಈ ಭಾನುವಾರ ನಿಮ್ಮನ್ನು ರಂಜಿಸಲು ಹೊಸ ಸಿನಿಮಾವೊಂದು ಪ್ರಸಾರವಾಗುತ್ತಿದೆ.


ರಿಪಬ್ಲಿಕ್ ಡೇ ನಿಮಿತ್ತ ಮನೆಯಲ್ಲೇ ಕೂತು ಎಂಜಾಯ್ ಮಾಡಲು ಉದಯ ಟಿವಿ ಹೊಚ್ಚ ಹೊಸ ಸಿನಿಮಾ ‘ಕಿಸ್’ ಪ್ರಸಾರ ಮಾಡುತ್ತಿದೆ. ವಿರಾಟ್-ಶ್ರೀಲೀಲಾ ಅಭಿನಯದ ಕಿಸ್ ಯೂಥ್ ಫುಲ್ ಸ್ಟೋರಿ ಇರುವ ಸಿನಿಮಾ. ಹೀಗಾಗಿ ನಿಮ್ಮನ್ನು ಮನರಂಜಿಸೋದು ಗ್ಯಾರಂಟಿ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕಿಸ್ ನಿಮ್ಮ ಮುಂದೆ ಬರುವುದು ಇಂದು ಸಂಜೆ 6 ಗಂಟೆಗೆ.

ಇನ್ನು ಜೀ ಕನ್ನಡ ವಾಹಿನಿಯಲ್ಲಿ ಈ ಭಾನುವಾರ ಭರ್ಜರಿ ಧಮಾಕ ಇದೆ. ಮಧ್ಯಾಹ್ನ 2.30 ಕ್ಕೆ ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದ್ದು, ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಎಂಟ್ರಿ ಕೊಡಲಿದ್ದಾರೆ. ಅದಲ್ಲದೆ, ಸಂಜೆ 7.30 ಕ್ಕೆ ಕಾಮಿಡಿ ಅವಾರ್ಡ್ ಕಾರ್ಯಕ್ರಮದ ಮುಂದುವರಿದ ಭಾಗ ವೀಕ್ಷಿಸಬಹುದು. ಇದಲ್ಲದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎಲಿಮಿನೇಟ್ ಆಗುತ್ತಿರುವುದು ಯಾರು ಬಿಗ್ ಬಾಸ್ ಅಂತಿಮ ಹಂತಕ್ಕೆ ಮುಂದುವರಿಯುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ