ಶತಕದ ಸಂಭ್ರಮದಲ್ಲಿ ಜೊತೆ ಜೊತೆಯಲಿ ಅನು-ಆರ್ಯವರ್ಧನ್

ಗುರುವಾರ, 23 ಜನವರಿ 2020 (09:44 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಟಿಆರ್ ಪಿ ವಿಚಾರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಧಾರವಾಹಿ ಜೊತೆ ಜೊತೆಯಲಿ. ಈ ಧಾರವಾಹಿಗೆ ಇಂದು ಶತಕದ ಸಂಭ್ರಮ.


ಇಂದು ಧಾರವಾಹಿಯ ನೂರನೇ ಕಂತು ಪ್ರಸಾರವಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವುದಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ರಿಮೇಕ್ ಆಗುತ್ತಿರುವ ಧಾರವಾಹಿ ಇತ್ತೀಚೆಗಷ್ಟೇ ಡಿಸೆಂಬರ್ ತಿಂಗಳಿನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಧಾರವಾಹಿ ಎಂಬ ಪ್ರಶಸ್ತಿ ಪಡೆದಿತ್ತು.

ಅನು-ಆರ್ಯವರ್ಧನ್ ಜೋಡಿಯ ಅಭಿನಯ ಎಲ್ಲರ ಮನಸೂರೆಗೊಂಡಿದೆ. ಮೂಲತಃ ಮರಾಠಿ ಧಾರವಾಹಿಯ ರಿಮೇಕ್ ಆಗಿದ್ದರೂ ಈಗ ಇಲ್ಲಿನ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ಕತೆ ಬದಲಾಯಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ