ಬೆಂಗಳೂರು: ಕೊರೋನಾನಿಂದಾಗಿ ಎಲ್ಲಾ ಟಿವಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಐಪಿಎಲ್ ಕೂಡಾ ರದ್ದಾಗಿದೆ.ಹೀಗಿರುವಾಗ ನೂರಾರು ಜನರು ಕೆಲಸ ಮಾಡುವ ಬಿಗ್ ಬಾಸ್ ಶೋ ಯಾಕೆ ಪ್ರಸಾರ ಮಾಡಬೇಕು?
ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ನೆಟ್ಟಿಗರು ಎತ್ತಿದ್ದಾರೆ. ಬಿಗ್ ಬಾಸ್ ಶೋನಲ್ಲೂ ನೂರಾರು ಜನರು ಕೆಲಸ ಮಾಡುತ್ತಾರೆ. ಅವರ ಸುರಕ್ಷತೆಯೂ ಮುಖ್ಯವಲ್ಲವೇ? ಹಾಗಾಗಿ ಬಿಗ್ ಬಾಸ್ ಕನ್ನಡ ಶೋವನ್ನೂ ರದ್ದು ಮಾಡಲಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಸದ್ಯಕ್ಕೆ ಕನ್ನಡ ಕಿರುತೆರೆ ವಾಹಿನಿಯಲ್ಲಿ ಮನರಂಜಿಸುತ್ತಿರುವ ಏಕೈಕ ರಿಯಾಲಿಟಿ ಶೋ ಎಂದರೆ ಬಿಗ್ ಬಾಸ್. ಸ್ಪರ್ಧಿಗಳಿಗೆ ಹೊರಜಗತ್ತಿನ ಸಂಪರ್ಕವಿಲ್ಲದ ಕಾರಣ ಅವರು ಸೇಫ್ ಆಗಿರಬಹುದು. ಆದರೆ ಅದಕ್ಕಾಗಿ ಶ್ರಮ ಪಡುವ ಕಾರ್ಮಿಕರ ಪಾಡೇನು ಎಂಬುದು ನೆಟ್ಟಿಗರ ಪ್ರಶ್ನೆ.