ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಹಾಡಿನ ಶೋ ಆರಂಭ

ಶನಿವಾರ, 7 ಡಿಸೆಂಬರ್ 2019 (09:03 IST)
ಬೆಂಗಳೂರು: ಈಗಾಗಲೇ ಕನ್ನಡ ಕೋಗಿಲೆ ಶೋ ಮೂಲಕ ಹೊಸ ಸಂಚಲನ ಮೂಡಿಸಿದ್ದ ಕಲರ್ಸ್ ವಾಹಿನಿ ಇದೀಗ ಮತ್ತೊಂದು ಹಾಡಿನ ಶೋ ಆರಂಭಿಸುವ ಸೂಚನೆ ನೀಡಿದೆ.


ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ಶೋ ಈಗ ಮುಕ್ತಾಯವಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಸಿಂಗಿಂಗ್ ಶೋ ನಡೆಸಲು ವಾಹಿನಿ ತೀರ್ಮಾನಿಸಿದ್ದು ಇದಕ್ಕೆ ‘ಹಾಡು ಕರ್ನಾಟಕ’ ಎಂದು ಹೆಸರಿಡಲಾಗಿದೆ.

ಸದ್ಯದಲ್ಲೇ ಈ ಶೋ ಆರಂಭಿಸಿರುವುದಾಗಿ ವಾಹಿನಿ ಹೇಳಿದೆ. ಆದರೆ ಪ್ರೋಮೋ ನೋಡಿದರೆ ಇದು ಗೃಹಿಣಿಯರು, ಸಾಮಾನ್ಯರನ್ನು ಗುರಿಯಾಗಿಸಿ ಮಾಡುತ್ತಿರುವ ಶೋನಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ