ಜೀ ಕನ್ನಡ ಸರಿಗಮಪ ಶೋಗೆ ಅಡಿಷನ್ ಶುರು

ಬುಧವಾರ, 4 ಡಿಸೆಂಬರ್ 2019 (09:00 IST)
ಬೆಂಗಳೂರು: ಜೀ ಕನ್ನಡ ವಾಹಿನಿ ಮತ್ತೆ ತನ್ನ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಆರಂಭಿಸುತ್ತಿದೆ. ಇದಕ್ಕಾಗಿ ಈಗಾಗಲೇ ಆಡಿಷನ್ ಶುರು ಮಾಡಿಕೊಂಡಿದೆ.


ಕಳೆದ ಸೀಸನ್ ನಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಮೀಸಲಾಗಿತ್ತು. ಈ ಸೀಸನ್ ನಲ್ಲಿ ಮತ್ತೆ ವಯಸ್ಕರಿಗೆ ಶೋ ಆಯೋಜಿಸುತ್ತಿದೆ. ಇದು ಸೀಸನ್ 17 ಆಗಲಿದ್ದು, ಈ ಬಾರಿಯೂ ರಾಜ್ಯದ ವಿವಿಧೆಡೆ ಆಡಿಷನ್ ನಡೆಸುತ್ತಿದೆ.

ಇದೇ ಶನಿವಾರ ಕೊಪ್ಪಳ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಆಡಿಷನ್ಸ್ ನಡೆಯಲಿದೆ. ದೊಡ್ಡ ವೇದಿಕೆಯಲ್ಲಿ ಹಾಡುವ ಕನಸು ನಿಮ್ಮದಾಗಿದ್ದರೆ, ನಿಮ್ಮಲ್ಲಿ ಪ್ರತಿಭೆಯಿದ್ದರೆ ತಪ್ಪದೇ ಆಡಿಷನ್ ನಲ್ಲಿ ಭಾಗವಹಿಸಿ ಅದೃಷ್ಟ ಪರೀಕ್ಷೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ