ಹೊಸ ವರ್ಷಕ್ಕೆ ಸರಿಗಮಪ ರಿಯಾಲಿಟಿ ಶೋ ಆರಂಭದ ದಿನಾಂಕ ಬಹಿರಂಗ

ಬುಧವಾರ, 1 ಜನವರಿ 2020 (09:35 IST)
ಬೆಂಗಳೂರು: ಹೊಸ ವರ್ಷಕ್ಕೆ ಜೀ ಕನ್ನಡ ತನ್ನ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಆರಂಭದ ದಿನಾಂಕವನ್ನು ವಾಹಿನಿ ಪ್ರಕಟಿಸಿದೆ.


ಹೊಸ ವರ್ಷಕ್ಕೆ ಸರಿಗಮಪ ಶೋ ಹೊಸ ಪ್ರೋಮೋ ಹೊರಬಿಟ್ಟಿರುವ ಜೀ ವಾಹಿನಿ ಹೊಸ ಆವೃತ್ತಿ ಜನವರಿ 18 ರಿಂದ ಪ್ರತೀ ಶನಿವಾರ ಮತ್ತು ಭಾನುವಾರ 7.30 ಕ್ಕೆ ಆರಂಭವಾಗುತ್ತಿರುವುದಾಗಿ ಘೋಷಿಸಿದೆ.

ಈ ಬಾರಿಯೂ ಸಂಗೀತ ನಿರ್ದೇಶಕ ಹಂಸಲೇಖ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ನಿರ್ಣಾಯಕರಾಗಲಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಅಡಿಷನ್ ನಡೆಸಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ