ಸೆಟ್ ನಲ್ಲಿ ಮಾಸ್ಕ್, ಸ್ಯಾನಿಟೈಸರ್: ಧಾರವಾಹಿಗಳ ಶೂಟಿಂಗ್ ಸೆಟ್ ಈಗ ಹೇಗಿದೆ ಗೊತ್ತಾ?

ಸೋಮವಾರ, 25 ಮೇ 2020 (10:43 IST)
ಬೆಂಗಳೂರು: ಕೊರೊನಾ ಭಯದಲ್ಲೇ ಶೂಟಿಂಗ್ ಶುರು ಮಾಡಿರುವ ಧಾರವಾಹಿ ತಂಡ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜೂನ್ 1 ರಿಂದ ಹೊಸ ಸಂಚಿಕೆಗಳು ಆರಂಭವಾಗಲಿದ್ದು, ಇಂದಿನಿಂದ ಧಾರವಾಹಿಗಳ ಶೂಟಿಂಗ್ ಶುರು ಮಾಡಲಾಗಿದೆ.


ಕಡಿಮೆ ತಂತ್ರಜ್ಞರನ್ನು ಬಳಸಿ, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮಾಡಲಾಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡ ಫೇಸ್ ಬುಕ್ ಲೈವ್ ಮುಖಾಂತರ ತಾವು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸಿದೆ.

ನಿರ್ದೇಶಕರಿಂದ ಹಿಡಿದು ಎಲ್ಲಾ ತಂತ್ರಜ್ಞರು ಮಾಸ್ಕ್, ಗ್ಲೌಸ್, ಗಾರ್ಡ್ ಹಾಕಿ ಶೂಟಿಂಗ್ ಮಾಡುತ್ತಿದ್ದಾರೆ. ಕಲಾವಿದರು ಸೆಟ್ ಗೆ ಬರುವಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ಕಲಾವಿದರು ಕೂರುವ ಪೀಠೋಪಕರಣಗಳು, ಶೂಟಿಂಗ್ ನಡೆಯುವ ಸ್ಥಳದ ಮೂಲೆ ಮೂಲೆಗಳಲ್ಲೂ ಸ್ಯಾನಿಟೈಸ್ ಮಾಡಲಾಗಿದೆ.

ಇನ್ನು, ಮೇಕಪ್ ಮ್ಯಾನ್ ಕೂಡಾ ಕೈಯಿಂದ ಟಚ್ ಮಾಡದೇ ಬ್ರಷ್ ಬಳಸಿ ಎಚ್ಚರಿಕೆಯಿಂದ ಮೇಕಪ್ ಮಾಡುತ್ತಿದ್ದಾರೆ. ಇದರ ಜತೆಗೆ ಧಾರವಾಹಿಯಲ್ಲೂ ಕೊರೋನಾ ಬಗ್ಗೆ ಜಾಗೃತಿ ಸಂದೇಶ ನೀಡಲಾಗುವುದು ಎಂದು ನಟ ಅನಿರುದ್ಧ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ