ಸಿಹಿ ಕಹಿ ಚಂದ್ರು ಔಟ್! ಬಿಗ್ ಬಾಸ್ ಮನೆಯೊಳಗೆ ಶುರುವಾಗಿದೆ ಅರಿಯದ ನಡುಕ!
ದಿವಾಕರ್, ಚಂದನ್, ಸಮೀರ್ ಆಚಾರ್ಯರಿಂದ ಹಿಡಿದು, ಸಿಹಿ ಕಹಿ ಚಂದ್ರು ಅವರಿಗೆ ಆಪ್ತರಾಗಿದ್ದ ಅನುಪಮಾ ಗೌಡ, ಜಗನ್ ಸಿಹಿ ಕಹಿ ಚಂದ್ರು ಹೊರ ಹೋಗಿದ್ದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರೇ ಹೋಗುತ್ತಾರೆಂದರೆ ಇನ್ನು ನಮ್ಮ ಕತೆ ಏನು ಎಂದು ದಿವಾಕರ್ ಎಂದರೆ, ಅವರ ಮುಂದೆ ನಾವೆಲ್ಲಾ ಏನೂ ಅಲ್ಲ ಎಂದು ಆತಂಕದಿಂದಲೇ ಮಾತಾಡಿಕೊಂಡರು. ಅಂತೂ ಬಿಗ್ ಬಾಸ್ ಮನೆಯಲ್ಲಿ ಬಿಗ್ ವಿಕೆಟ್ ಬಿದ್ದಿರುವುದು ದೊಡ್ಡ ಶಾಕ್ ಉಂಟು ಮಾಡಿದೆ.