ಸುದೀಪ್ ನಿರ್ಮಾಣದ ಧಾರಾವಾಹಿಗೆ ಅದ್ಭುತ ಪ್ರತಿಕ್ರಿಯೆ

ಮಂಗಳವಾರ, 31 ಜನವರಿ 2017 (13:01 IST)
ಹಲವಾರು ಜನಪ್ರಿಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಷೋಗಳ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಾರಸ್ದಾರ ಎಂಬ ವಿನೂತನ ಧಾರಾವಾಹಿಯನ್ನು ಆರಂಭಿಸಿತ್ತು. 
 
ಒಂದು ತಿಂಗಳ ಅವಧಿಯಲ್ಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಕ ಬಳಗವನ್ನು ಸಂಪಾದಿಸಿದ ಈ ಧಾರಾವಾಹಿಯಲ್ಲಿ ಇದೀಗ ಮಹತ್ತರ ಪಾತ್ರವೊಂದರ ಎಂಟ್ರಿಯಾಗುತ್ತಿದೆ. ಅದೂ ಬೇರಾರೂ ಅಲ್ಲ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟ್ಟ ಮಗು ಚಿತ್ರಾಲಿ.  
 
ಶಿವಪುರ ಎಂಬ ಪುಟ್ಟಗ್ರಾಮದಲ್ಲಿ ನಡೆದಂಥ ಕಥೆ ಇದಾಗಿದ್ದು ಅಲ್ಲಿನ 2 ಮನೆತನಗಳ ಕಥೆಯನ್ನು ಈ ಧಾರಾವಾಹಿ ಹೇಳಲಿದೆ.  ಅದರಲ್ಲಿ ಸಿಂಹವಂಶದ ಕುಟುಂಬದಲ್ಲಿ ನಡೆಯುವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಧಾರಾವಾಹಿಯನ್ನು ರೂಪಿಸಲಾಗಿದೆ. ಸಿಂಹವಂಶದ ಸೊಸೆಯಾದ ಭವಾನಿ ತಾನು ಹೆತ್ತ ಹೆಣ್ಣುಮಗುವನ್ನು ಉಳಿಸಿಕೊಳ್ಳಲು ಹೋರಾಡುವುದೇ ವಾರಸ್ದಾರ ಕಥೆಯ ಮುಖ್ಯ ತಿರುಳಾಗಿದೆ. 
 
ತಾನು ಹೆತ್ತ ಮಗು ಹೆಣ್ಣಲ್ಲ, ಗಂಡು ಎಂದು ನಿರೂಪಿಸಲು ಆ ಮಗುವನ್ನು ಗಂಡು ಮಕ್ಕಳತೆಯೇ ಸಾಕುತ್ತಾಳೆ. ಇಲ್ಲಿ ಭವಾನಿಯ ಶೂರತ್ವದ ಭಾವವನ್ನು ತುಂಬುತ್ತಾಳೆ. ಅದೇ ರೀತಿ 
ಬೆಳೆಸುತ್ತಾಳೆ. ಇಲ್ಲಿ ಭವಾನಿಯ ಮುಖ್ಯ ಪಾತ್ರದಲ್ಲಿ ನಟಿ ಯಜ್ಞಾಶೆಟ್ಟಿ ನಟಿಸಿದ್ದಾರೆ. ಎದ್ದೇಳು ಮಂಜುನಾಥ ಸೇರಿದಂತೆ ಹಲವಾರು ಚಲನಚಿತ್ರಗಳ ಮೂಲಕ ಜನಪ್ರಿಯಳಾದ ಯಜ್ಞಶೆಟ್ಟಿ ವಾರಸ್ದಾರ ಮೂಲಕ ಕಿರುತೆರೆಗೂ ಕಾಲಿಟ್ಟಿದ್ದರು. 
 
ಈಕೆಗೆ ಮಗನಾಗಿ (ಳಾಗಿ) 5 ವರ್ಷದ ಪುಟ್ಟ ಹುಡುಗಿ ಚಿತ್ರಾಲಿ ತೇಜಪಾಲ್ ಅಭಿನಯಿಸುತ್ತಿದೆ. ಈ ಧಾರಾವಾಹಿಯಲ್ಲಿ ಈಕೆಯ ವಯಸ್ಸು 7 ವರ್ಷ ಎನ್ನುವುದು ಮತ್ತೊಂದು ವಿಶೇಷ. ಇದೇ ಫೆಬ್ರವರಿ 8 ರಿಂದ ಚಿತ್ರಾಲಿ ಸಿಂಹವಂಶದ ಹೆಣ್ಣು ವಾರಸ್ದಾರಳಾಗಿ ಕಿರುತೆರೆಯಲ್ಲಿ ಪ್ರತ್ಯಕ್ಷಳಾಗಲಿದ್ದಾಳೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 7.30 ರಿಂದ ಜೀ 
ಕನ್ನಡವಾಹಿನಿಯಲ್ಲಿ ‘ವಾರಸ್ದಾರ’ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ