ಗಡ್ಡ, ಮೀಸೆ ಬೋಳಿಸಿಕೊಳ್ಳುತ್ತಿರುವ ಕನ್ನಡ ಕಿರುತೆರೆ ನಾಯಕರು

ಗುರುವಾರ, 2 ಏಪ್ರಿಲ್ 2020 (09:48 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹ್ಯಾಂಡ್ಸಮ್ ಹಂಕ್ ಗಳು ಎಂದೇ ಗುರುತಿಸಿಕೊಳ್ಳುವ ಹೆಚ್ಚಿನ ನಟರು ಈ ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲೇ ಕೂತು ಗಡ್ಡ, ಮೀಸೆಗೆ ಕತ್ತರಿ ಹಾಕಿ ಕ್ಲೀನ್ ಶೇವ್ ಮಾಡಿಕೊಳ್ಳುತ್ತಿದ್ದಾರೆ! ಇದಕ್ಕೆ ಕಾರಣವೇನು ಗೊತ್ತಾ?


ಕಿರುತೆರೆ ನಟರ ಪೈಕಿ ಚಂದನ್ ಕುಮಾರ್ ಗಡ್ಡ ಮೀಸೆ ಬೋಳಿಸಲು ಪ್ರೇರೇಪಿಸಿದ ಮೊದಲಿಗರು. ಕ್ಲೀನ್ ಶೇವ್ ಮಾಡಿಕೊಂಡ ಚಂದನ್ ಇತರ ತಮ್ಮ ಸ್ನೇಹಿತ ನಟರಿಗೂ ಕ್ಲೀನ್ ಶೇವ್ ಮಾಡುವ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿದ್ದಾರೆ.

ಅದರಲ್ಲಿ ಪಾಲ್ಗೊಂಡ ನಟ ವಿನಯ್ ಗೌಡ, ಚೇತನ್ ಚಂದ್ರ ಸೇರಿದಂತೆ ಹಲವರು ಈಗ ಕ್ಲೀನ್ ಶೇವ್ ಮಾಡಿಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಲುಕ್ ನೊಂದಿಗೆ ಫೋಟೋ ಅಪ್ ಲೋಡ್ ಮಾಡುತ್ತಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಸಿಬ್ಬಂದಿಗೆ ಗೌರವ ಸೂಚಿಸಲು ಈ ಅಭಿಯಾನ ಮಾಡಲಾಗುತ್ತಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ