ಕೋವಿಡ್-19: ಕನ್ನಡ ಕಿರುತೆರೆ ಕಲಾವಿದರಿಂದಲೂ ಭಾರೀ ಸಹಾಯ

ಗುರುವಾರ, 2 ಏಪ್ರಿಲ್ 2020 (09:30 IST)
ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ನಲುಗುತ್ತಿರುವ ಸಂಕಷ್ಟಪೀಡಿತರಿಗೆ ಕನ್ನಡ ಕಿರುತೆರೆ ಕಲಾವಿದರೂ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ.


ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ತಮ್ಮ ತಂಡದೊಂದಿಗೆ ಬಡವರು, ನಿರ್ಗತಿಕರಿಗೆ ಊಟ, ಅಗತ್ಯ ದಿನಸಿ ಹಂಚುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಬ್ಬ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.

ಇನ್ನು, ಜೊತೆ ಜೊತೆಯಲಿ ಧಾರವಾಹಿ ನಟಿ ಮೇಘಾ ಶೆಟ್ಟಿ, ಗಟ್ಟಿಮೇಳ ಧಾರವಾಹಿ ನಾಯಕಿ ನಿಶಾ ಮಿಲನಾ, ನಟ ಚಂದನ್ ಕುಮಾರ್ ಸೇರಿದಂತೆ ಹಲವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಪ್ರಧಾನಿ ಪರಿಹಾರ ನಿಧಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ