ನಂದಿನಿ ಧಾರವಾಹಿಯಿಂದ ಹೊರಬಂದ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್

ಸೋಮವಾರ, 2 ಡಿಸೆಂಬರ್ 2019 (09:36 IST)
ಬೆಂಗಳೂರು: ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿ ನಾಯಕಿ ಪಾತ್ರಧಾರಿ ನಿತ್ಯಾ ರಾಮ್ ಧಾರವಾಹಿಯಿಂದ ಹೊರಬರುತ್ತಿದ್ದಾರೆ.


ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕನಾಗಿರುವ ನಿತ್ಯಾ ಕಿರುತೆರೆಯಲ್ಲಿ ಜನಪ್ರಿಯ ನಟಿ. ಈಕೆ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಧಾರವಾಹಿಯಿಂದ ಹೊರಬರುತ್ತಿದ್ದಾರೆ.

ನಿತ್ಯಾ ವಿವಾಹವಾಗುತ್ತಿರುವ ಹುಡುಗ ವಿದೇಶದಲ್ಲಿ ಉದ್ಯಮಿ. ಹೀಗಾಗಿ ಮದುವೆಯ ಬಳಿಕ ನಿತ್ಯಾ ಗಂಡನ ಮನೆಗೆ ಹೋಗುವ ಕಾರಣಕ್ಕೆ ಧಾರವಾಹಿಯಿಂದ ಹೊರಬರುವುದು ಅನಿವಾರ್ಯವಾಗಿದೆ. ಜನಪ್ರಿಯ ಧಾರವಾಹಿಯಾಗಿರುವ ನಂದಿನಿಗೆ ಇನ್ನು, ನಾಯಕಿ ಪಾತ್ರಧಾರಿಯಾಗಿ ಸ್ಯಾಂಡಲ್ ವುಡ್, ಕಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಚಿಟ್ಟೆ ಸಿನಿಮಾ ಖ್ಯಾತಿಯ ಛಾಯಾಸಿಂಗ್ ಆಯ್ಕೆಯಾಗಿದ್ದಾರೆ. ಇದು ಛಾಯಾ ಸಿಂಗ್ ಗೆ ಕಿರುತೆರೆಯಲ್ಲಿ ಹೊಸ ಅನುಭವವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ