ಜೀ ಕನ್ನಡದಲ್ಲಿ ಮತ್ತೆ ಕಾಮಿಡಿ ಕಿಲಾಡಿಗಳು ಆರಂಭ

ಸೋಮವಾರ, 12 ಆಗಸ್ಟ್ 2019 (08:53 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಮತ್ತೆ ಆರಂಭವಾಗಲಿದೆ. ಆದರೆ ಯಾವಾಗಿನಿಂದ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.


ಶೀಘ್ರದಲ್ಲೇ ಕಾಮಿಡಿ ಕಿಲಾಢಿಗಳು ಸೀಸನ್ 3 ಆರಂಭವಾಗುತ್ತಿರುವುದಾಗಿ ವಾಹಿನಿ ಪ್ರಕಟಿಸಿದೆ. ಆದರೆ ಇನ್ನೂ ದಿನಾಂಕ ಘೋಷಿಸಿಲ್ಲ. ಇನ್ನೇನು ಸರಿಗಮಪ ಸೀಸನ್ ಮುಕ್ತಾಯವಾಗಲಿದ್ದು, ಬಹುಶಃ ಅದಾದ ಬಳಿಕ ಕಾಮಿಡಿ ಕಿಲಾಡಿಗಳು ಪ್ರಸಾರವಾಗಬಹುದು ಎನ್ನಲಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಹಲವು ಕಡೆಗೆ ತೆರಳಿ ಜೀ ಕನ್ನಡ ತಂಡ ಅಡಿಷನ್ ಕೆಲಸ ಮುಗಿಸಿದೆ. ಸದ್ಯದಲ್ಲೇ ಶೋ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ