ಹಳೇ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ನಲ್ಲಿ ಮತ್ತೆ ಬರುತ್ತಿದೆ ಎರಡು ಧಾರವಾಹಿಗಳು

ಮಂಗಳವಾರ, 23 ಜುಲೈ 2019 (09:26 IST)
ಬೆಂಗಳೂರು: ಹಳೆಯ ಸಿನಿಮಾಗಳ ಟೈಟಲ್ ನಲ್ಲಿ ಹಲವು ಧಾರವಾಹಿಗಳು ಬೇರೆ ಬೇರೆ ಚಾನೆಲ್ ನಲ್ಲಿ ಪ್ರಸಾರವಾಗಿದ ಉದಾಹರಣೆಯಿದೆ. ಇದಿಗ ಮತ್ತೆರಡು ಧಾರವಾಹಿಗಳು ಹಳೇ ಸಿನಿಮಾ ಟೈಟಲ್ ನೊಂದಿಗೆ ಬರುತ್ತಿದೆ.


ಉದಯ ಟಿವಿಯಲ್ಲಿ ಈ ಹಿಂದೆ ಮಾನಸ ಸರೋವರ ಎಂಬ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ ಸೂಪರ್ ಹಿಟ್ ಸಿನಿಮಾದ ಟೈಟಲ್ ನೊಂದಿಗೆ ಧಾರವಾಹಿ ಆರಂಭವಾಗಿತ್ತು. ಅದೀಗ ಮುಗಿಯುವ ಹಂತಕ್ಕೆ ಬಂದಿದೆ.

ಈಗ ಉದಯ ಟಿವಿ ಮತ್ತೆರಡು ಧಾರವಾಹಿ ಪ್ರಾರಂಭಿಸುತ್ತಿದ್ದು, ಅದಕ್ಕೆ ಹಳೆಯ ಸಿನಿಮಾಗಳ ಟೈಟಲ್ ಇಟ್ಟುಕೊಂಡಿದೆ. ಒಂದು ‘ಕಸ್ತೂರಿ ನಿವಾಸ’ ಮತ್ತು ಇನ್ನೊಂದು ‘ಅಪೂರ್ವ ಸಂಗಮ’ ಎನ್ನುವ ಧಾರವಾಹಿಗಳು ಬರುತ್ತಿವೆ. ಕನ್ನಡ ಸಿನಿಮಾದ ಎವರ್ ಗ್ರೀನ್ ಹಿಟ್ ಸಿನಿಮಾದ ಟೈಟಲ್ ನಲ್ಲಿ ಬರುತ್ತಿರುವ ಧಾರವಾಹಿಗಳು ಶೀಘ್ರದಲ್ಲೇ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ