ಮುಂಬೈನಲ್ಲಿ 144 ಸೆಕ್ಷನ್ ಜಾರಿ!

ಶನಿವಾರ, 11 ಡಿಸೆಂಬರ್ 2021 (07:03 IST)
ಮುಂಬೈ : ಒಮಿಕ್ರಾನ್ ಸೋಂಕಿತರ ಸಂಖ್ಯೆ ದೇಶದಲ್ಲಿ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ 17ಕ್ಕೆ ಏರಿಕೆಯಾಗಿದೆ.

ಒಮಿಕ್ರಾನ್ ಸೋಂಕು ಹೆಚ್ಚಾದ ಬೆನ್ನಲ್ಲೇ ಮುಂಬೈನಲ್ಲಿ ಇಂದು ಮತ್ತು ನಾಳೆ (ಡಿ.11 ಮತ್ತು 12ರಂದು) ಸೆಕ್ಷನ್ 144 ಹೇರಲಾಗಿದೆ.  ಅದರ ಅನ್ವಯ ಮುಂಬೈನಲ್ಲಿ ರ್ಯಲಿಗಳು, ಮೆರವಣಿಗೆಗಳು ಮತ್ತಿತರ ರೀತಿಯ ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದ್ದು, ಒಮಿಕ್ರಾನ್ ಇನ್ನಷ್ಟು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾ ಸೋಂಕಿನ ಹೊಸ ತಳಿ ಒಮಿಕ್ರಾನ್ ಸದ್ಯ ಭಾರತ ಸೇರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ.  ನಮ್ಮ ದೇಶದಲ್ಲೂ 32 ಮಂದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಅದರಲ್ಲೂ ಕೂಡ ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಕೇಸ್ಗಳಿವೆ.

ನಿನ್ನೆ ಮೂರು ವರ್ಷದ ಮಗುವಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ನಿನ್ನೆ ಪತ್ತೆಯಾದ ಏಳು ಕೇಸ್ಗಳಲ್ಲಿ ಮೂರು ಪ್ರಕರಣಗಳು ಮುಂಬೈನಿಂದ ಮತ್ತು ನಾಲ್ಕು ಕೇಸ್ಗಳು ಪಿಂಪ್ರಿಯ ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್ನಿಂದ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ