ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ ದಾಖಲು
2ನೇ ಪೋಕ್ಸೋ ಕೇಸ್ ಸಂಬಂಧ ಸಿಆರ್ಪಿಸಿ 161 ಅಡಿ ನಿನ್ನೆ ಮೈಸೂರಿನಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರು ಹಾಗೂ ತಾಯಿಯ ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು ದಾಖಲಿಸಿದ್ದರು.
ಆದರೆ ಸಂತ್ರಸ್ತ ಬಾಲಕಿ & ತಾಯಿ ನೀಡಿದ ಹೇಳಿಕೆಯಲ್ಲಿ ಕೆಲ ವ್ಯತ್ಯಾಸ, ಗೊಂದಲಗಳಿದೆ ಎನ್ನಲಾಗಿದೆ. ಅಲ್ಲದೇ ಚಿತ್ರದುರ್ಗ ಜಡ್ಜ್ ಮುಂದೆ ಹಾಜರುಪಡಿಸಿ, ಮತ್ತೋರ್ವ ಬಾಲಕಿಯ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.