ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.23 ರಷ್ಟು ಜಿಎಸ್ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. 14,593 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ 11,820 ಕೋಟಿ ರೂ. ಸಂಗ್ರಹವಾಗಿತ್ತು.
ಇನ್ನೂ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಿನ ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷ 27,495 ಕೋಟಿ ರೂ. ಸಂಗ್ರಹವಾಗಿದ್ದ ಮಹಾರಾಷ್ಟ್ರಕ್ಕೆ 33,196 ಕೋಟಿ ಜಿಎಸ್ಟಿ ಹರಿದುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.21 ರಷ್ಟು ಹೆಚ್ಚಾಗಿದೆ.
ಗುಜರಾತ್ 11,721 ಕೋಟಿ ರೂ., ತಮಿಳುನಾಡು 11,559 ಕೋಟಿ ರೂ., ಪಶ್ಚಿಮ ಬಂಗಾಳ 6,447 ಕೋಟಿ ರೂ., ಹರ್ಯಾಣ 10,035 ಕೋಟಿ ರೂ., ಉತ್ತರಪ್ರದೇಶ 10,320 ಕೋಟಿ ರೂ. ಹಾಗೂ ಹಾಗೂ ತೆಲಂಗಾಣ 5,622 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದೆ