ರಾಷ್ಟ್ರ ರಾಜಧಾನಿಯಲ್ಲಿ ಶಾಖದ ಅಲೆ!

ಶನಿವಾರ, 30 ಏಪ್ರಿಲ್ 2022 (10:52 IST)
ನವದೆಹಲಿ : ಕಳೆದ 72 ವರ್ಷಗಳಲ್ಲಿ ದೆಹಲಿಯಲ್ಲಿ 2ನೇ ಬಾರಿ ಅತಿ ಹೆಚ್ಚು ಬಿಸಿಲಿನ ತಾಪಮಾನ ದಾಖಲಾಗಿರುವುದು ಕಂಡುಬಂದಿದೆ.
 
ಹವಾಮಾನ ಇಲಾಖೆಯ ಪ್ರಕಾರ, ಈಗಾಗಲೇ ದೇಶಾದ್ಯಂತ ಹಲವು ಭಾಗಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು. ಇದರಿಂದಾಗಿ ವಿದ್ಯುತ್ ಪೂರೈಕೆಗೂ ಸಮಸ್ಯೆಯಾಗಿದೆ. ರಾಷ್ಟ್ರ ರಾಜಧಾನಿಯ ಸರಾಸರಿ ಮಾಸಿಕ ಗರಿಷ್ಠ ತಾಪಮಾನವು 40.2 ಡಿಗ್ರಿ ಸೆಲ್ಸಿಯಸ್ನಲ್ಲಿದೆ.

 
2010ರಲ್ಲಿ, ದೆಹಲಿಯು ಸರಾಸರಿ ಮಾಸಿಕ ಗರಿಷ್ಠ ತಾಪಮಾನ 40.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೆ ಬಿಸಿಲಿನ ತಾಪಮಾನ ಮಿತಿಮೀರಿದೆ. 

ಸಫ್ದರ್ಜಂಗ್ ವೀಕ್ಷಣಾಲಯವು ಸತತ ಎರಡನೇ ದಿನದ ಗರಿಷ್ಠ ತಾಪಮಾನ 43.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಿಂಗಳ ಒಟ್ಟು ತಾಪಮಾನವು 45.6 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ.

ದೆಹಲಿಯ ರಿಡ್ಜ್ (45.1 ಡಿಗ್ರಿ ಸೆಲ್ಸಿಯಸ್), ಮುಂಗೇಶ್ಪುರ (45.8 ಡಿಗ್ರಿ ಸೆಲ್ಸಿಯಸ್), ನಜಾಫ್ಗಢ (45.4 ಡಿಗ್ರಿ ಸೆಲ್ಸಿಯಸ್) ಮತ್ತು ಪಿತಾಂಪುರ (45.2 ಡಿಗ್ರಿ ಸೆಲ್ಸಿಯಸ್) ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚಿನದ್ದನ್ನು ದಾಖಲಿಸಿದೆ ಎನ್ನಲಾಗಿದೆ. 

ಇನ್ನೂ ರಾಜಸ್ಥಾನದ ಚುರು, ಬಾರ್ಮರ್, ಬಿಕಾನೇರ್ ಮತ್ತು ಶ್ರೀಗಂಗಾನಗರದಂತಹ ಸ್ಥಳಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಸಾಮಾನ್ಯವಾಗಿದೆ. ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ 45-46 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ತಲುಪಿರುವುದು ಅಚ್ಚರಿಯ ಸಂಗತಿ ಎಂದು ಹವಾಮಾನಶಾಸ್ತ್ರ ನವದೀಪ್ ದಹಿಯಾ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ