ಬೆಂಗಳೂರು : ಭಾರತದಲ್ಲಿ ಆಭರಣ ಖರೀದಿ ಕೂಡ ಒಂದು ಹೂಡಿಕೆ, ಆಸ್ತಿ ಎಂದು ಪರಿಗಣಿತ ಆಗಿರುವುದರಿಂದ ಒಡವೆ ಬಗ್ಗೆ ಜನರ ಆಸಕ್ತಿ ಕಡಿಮೆ ಆಗುವುದಿಲ್ಲ.
ಇನ್ನೂ ಸೌಂದರ್ಯ ವೃದ್ಧಿಗಾಗಿಯೂ ಆಭರಣ ಕೊಳ್ಳುವ ವಾಡಿಕೆ ನಮ್ಮಲ್ಲಿ ಇದೆ. ಮಾರುಕಟ್ಟೆಗೆ ಯಾವುದೇ ಹೊಸ ಶೈಲಿಯ ಆಭರಣಗಳು ಬಂದಾಗ ಅದನ್ನು ನೋಡಬೇಕು ನಮ್ಮ ಬಜೇಟ್ಗೆ ಸರಿ ಹೊಂದುವುದಾದರೆ ಕೊಳ್ಳಬೇಕು ಎಂಬ ಆಸೆ ಇರುತ್ತದೆ.
ಹೀಗಿರುವಾಗ ನೀವು ಆಭರಣ ಖರೀದಿಗೆ ಮನಸ್ಸು ಮಾಡಿದ್ದರೆ, ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ದರ ನಿಗದಿಯ ಬಗ್ಗೆ ಒಮ್ಮೆ ಪರಿಶೀಲಿಸಿ. ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,400 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 2,000 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,530 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 2,300 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,100 ರೂಪಾಯಿ ದಾಖಲಾಗಿದೆ.