ಮತ್ತೆ ಪೆಟ್ರೋಲ್ ಬೆಲೆ ದುಬಾರಿ!?
ಉಕ್ರೇನ್ ಮೇಲೆ ರಷ್ಯಾ ಯುದ್ಧದ ಕಾರ್ಮೋಡ ಆವರಿಸಿರುವ ಪರಿಣಾಮ ಕಚ್ಚಾತೈಲ ದರ ಏರಿಕೆ ಕಂಡಿದೆ. 90 ಡಾಲರ್ ಗಡಿ ದಾಟಿರುವ ಕಚ್ಚಾತೈಲ ಬೆಲೆ 125 ಡಾಲರ್ಗೆ ಏರಿಕೆಯಾಗಬಹುದು ಎಂದು ವರದಿಯಾಗಿದೆ.
ಕಳೆದ ಒಂದು ವಾರಗಳ ಹಿಂದೆ ಬ್ಯಾರಲ್ಗೆ 80 ಡಾಲರ್ (6,013 ರೂ.) ಇದ್ದ ಬೆಲೆ ಇದೀಗ 90 ಡಾಲರ್ಗೆ ಬಂದು ತಲುಪಿದೆ. ಇದಲ್ಲದೆ 2014ರ ಬಳಿಕ ಇದೀಗ ಮತ್ತೆ ರಷ್ಯಾದಲ್ಲಿ ಯುದ್ಧದ ಸನ್ನಿವೇಶ ಆರಂಭಗೊಂಡಿದೆ ಹಾಗಾಗಿ ತೈಲ ಹೊರೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.